ನಾಪೋಕ್ಲು, ಮೇ ೨: ಇಲ್ಲಿಗೆ ಸಮೀಪದ ಕೋಕೇರಿಯಲ್ಲಿ ಗಾಳಿ ಮಳೆಗೆ ಜೋಪಡಿ ಮೇಲೆ ಮರ ಬಿದ್ದು ಹಾನಿ ಆದ ಘಟನೆ ಬುಧವಾರ ಸಂಭವಿಸಿದೆ.

ಕೋಕೇರಿ ಗ್ರಾಮದ ಅಂಬಾಡಿ ಕಾಲೋನಿ ನಿವಾಸಿ ಬಡ ಕೂಲಿ ಕಾರ್ಮಿಕರಾದ ಪಿ ಜಿ ಕಾವೇರಿ ಎಂಬವರ ಮನೆಯ ಸಮೀಪವಿದ್ದ ಹಲಸಿನ ಮರದ ರೊಂಬೆ ಮುರಿದು ಬಿದ್ದು ಹಾನಿ ಸಂಭವಿಸಿದ್ದು ಮನೆಯವರು ಪಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದಾಗಿ ಮನೆಯಲ್ಲಿ ಇದ್ದ ಬಟ್ಟೆ ಗೃಹಪಯೋಗಿವಸ್ತು ಹಾಳಾಗಿದೆ.