ಗೋಣಿಕೊಪ್ಪಲು, ಮೇ.೨: ಜನಾಂಗದ ಕಲೆ ಸಂಸ್ಕೃತಿ ಉಳಿಯಬೇಕು ಮುಂದಿನ ಪೀಳಿಗೆಗೆ ಇದು ದೊಡ್ಡ ಕೊಡುಗೆಯಾಗಬೇಕು. ಆ ನಿಟ್ಟಿನಲ್ಲಿ ಹೆಗ್ಗಡೆ ಸಮಾಜವು ವಾರ್ಷಿಕವಾಗಿ ನಡೆಸುತ್ತಿರುವ ಕ್ರೀಡೋತ್ಸವ ಸಮಾಜಕ್ಕೆ ಮಾದರಿ ಯಾಗಬೇಕೆಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಕರೆ ನೀಡಿದರು.
ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ಹೆಗ್ಗಡೆ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ವಾರ್ಷಿಕ ಕ್ರೀಡೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು ಹೆಗ್ಗಡೆ ಸಮಾಜವು ರಾಜಕೀಯ ಮೀಸ ಲಾತಿಯಿಂದ ವಂಚಿತಗೊAಡಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವಕಾಶಗಳು ಹೆಚ್ಚಾಗಿ ಲಭಿಸಬೇಕು. ಈಗಾಗಲೇ ರಾಜಕೀಯ ಮೀಸಲಾತಿಗಾಗಿ ಸಂಬAಧಿಸಿದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ದಶಕಗಳ ಸಮಸ್ಯೆಗೆ ಪರಿಹಾರ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬಿಟ್ಟಂಗಾಲದಲ್ಲಿರುವ ಹೆಗ್ಗಡೆ ಸಮಾಜದ ಅಭಿವೃದ್ದಿಗಾಗಿ ಮುಂದಿನ ಸಾಲಿನಲ್ಲಿ ಅನುದಾನವನ್ನು ನೀಡುವುದಾಗಿ ಈ ಸಂದರ್ಭ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಹೆಗ್ಗಡೆ ಸಮಾಜದ ಜಿಲ್ಲಾಧ್ಯಕ್ಷÀ ಕೊರಕುಟ್ಟಿರ
(ಮೊದಲ ಪುಟದಿಂದ) ಸರಾಚಂಗಪ್ಪ, ಕೊಡಗು ಹೆಗ್ಗಡೆ ಸಮಾಜ ಕಳೆದ ೨೫ ವರ್ಷಗಳಿಂದ ಕ್ರೀಡೋತ್ಸವವನ್ನು ಆಚರಿಸುತ್ತ ಬರುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹೆಗ್ಗಡೆ ಸಮಾಜದ ಜನಾಂಗವು ವಾಸವಿದ್ದು ೮ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ವಿದ್ಯಾಭ್ಯಾಸಕ್ಕೆ ಹಾಗೂ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ವಾರ್ಷಿಕವಾಗಿ ಸಮಾಜ ಬಾಂಧವರು ಒಂದೆಡೆ ಸೇರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸರ್ಕಾರವು ಮುಂದಿನ ಸಾಲಿನಿಂದ ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಆರ್ಥಿಕ ಸಹಕಾರ ನೀಡಬೇಕು ಹಾಗೂ ರಾಜಕೀಯ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಡಬೇಕೆಂದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜಿಕೆವಿಕೆಯ ವಿಶ್ರಾಂತ ಕುಲಪತಿ ಡಾ.ಪಡಿಞರಂಡ ಜಿ.ಚಂಗಪ್ಪ, ಮಾತನಾಡಿದರು. ವೇದಿಕೆಯಲ್ಲಿ ಹೆಗ್ಗಡೆ ಸಮಾಜದ ನಿಕಟಪೂರ್ವ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಸೇರಿದಂತೆ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
೩ ದಿನಗಳ ಕಾಲ ನಡೆಯುವ ಕ್ರೀಡೋತ್ಸವದಲ್ಲಿ ಪೊನ್ನಂಪೇಟೆ, ಹಾತೂರು, ಬಿಟ್ಟಂಗಾಲ, ಒಂಟಿಯAಗಡಿ, ಹಾಲುಗುಂದ, ಪಾರಾಣೆ, ಮೈತಾಡಿ, ಕಡಿಯತ್ತೂರು, ಬೆಟ್ಟಗೇರಿ ಹಾಗೂ ಕುಶಾಲನಗರ ೧೦ ವಲಯಗಳು ಭಾಗವಹಿಸಲಿವೆ. ಸಮಾಜದ ಭಾಂದವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಮೈದಾನದ ಸುತ್ತಲೂ ದುಡಿಕೊಟ್ಟಿನ ಮೂಲಕ ಮೆರವಣಿಗೆ ನಡೆಸಿ, ಶಾಸಕ ಪೊನ್ನಣ್ಣನವರನ್ನು ತಳಯತಕ್ಕಿ ಬೊಳ್‌ಚ ಮೂಲಕ ಮೈದಾನಕ್ಕೆ ಕರೆ ತರಲಾಯಿತು.
ಆರಂಭದಲ್ಲಿ ತೊತ್ತೆರ ವಿನ್ಯ ಪ್ರಾರ್ಥಿಸಿ ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಕ್ರೀಡಾ ಸಂಚಾಲಕ ಪಂದಿಕAಡ ನಾಗೇಶ್ ನಿರೂಪಿಸಿ. ಪಾಣಿಕುಟ್ಟಿರ ರಾಧ ಕುಟ್ಟಪ್ಪ ವಂದಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ
ಕಾರ್ಯಕ್ರಮದ ಅಂಗವಾಗಿ ಹೆಗ್ಗಡೆ ಸಮಾಜದ ಅರಣ್ಯ ಸಂಚಾರಿ ದಳದ ಅಧಿಕಾರಿ ಮುಖ್ಯಮಂತ್ರಿಗಳ ಪದಕ ವಿಜೇತ ತುದಿಮಾಡ ಸವಿ ಲೋಕೇಶ್, ಪೊಲೀಸ್ ಇಲಾಖೆಯ ಸೇವೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಚಂಗಚAಡ ನಿತಿನ್ ಮಾಚಯ್ಯ, ಅಗ್ನಿಶಾಮಕ ದಳದ ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಮಚ್ಚಂಡ ನಂಜಪ್ಪ, ಅವರುಗಳನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.