ಕೂಡಿಗೆ, ಮೇ ೨: ಇತಿಹಾಸ ನೆನಪುಗಳನ್ನು ಜೀವಂತವಾ ಗಿರಿಸುತ್ತದೆ, ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದು ಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಸಮೀಪದ ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಹಾರಂಗಿ ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಮಾನವ ಬಂಧುತ್ವ ವೇದಿಕೆ. ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಗ್ರ-ಸಮತೆಯೆಡೆಗೆ ಸಾಹಿತ್ಯ ಎಂಬ ವಿಷಯದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸಾಹಿತಿ ಅರ್ಜುನ್ ಮೌರ್ಯರವರ ಕೂಡಿಗೆ, ಮೇ ೨: ಇತಿಹಾಸ ನೆನಪುಗಳನ್ನು ಜೀವಂತವಾ ಗಿರಿಸುತ್ತದೆ, ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದು ಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಸಮೀಪದ ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಹಾರಂಗಿ ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಮಾನವ ಬಂಧುತ್ವ ವೇದಿಕೆ. ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಗ್ರ-ಸಮತೆಯೆಡೆಗೆ ಸಾಹಿತ್ಯ ಎಂಬ ವಿಷಯದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸಾಹಿತಿ ಅರ್ಜುನ್ ಮೌರ್ಯರವರ ನಾವು ತಿಳಿದೂ ತಿಳಿಯದೆಯೂ ಗುಲಾಮಗಿರಿಗೆ ದೂಡಲ್ಪಡುತ್ತಿದ್ದೇವೆ ಎಂದರು.

ಚಾಮರಾಜನಗರ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಎ.ಆರ್. ಗಂಗಾಧರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಮನುಷ್ಯ ವಿರೋಧಿ ಯಾಗಿರಲು ಸಾಧ್ಯವಿಲ್ಲ. ಮನುಷ್ಯ ವಂಶದ ಉದ್ಧಾರ ಮತ್ತು ಏಳಿಗೆ ಸಾಹಿತ್ಯದ ಮೂಲಕ ಮಾತ್ರ ಸಾಧ್ಯವಾಗಿದೆ. ಸಾಹಿತ್ಯ ಸಮಾಜವನ್ನು ಒಡೆಯುವಂತದು ಆಗಬಾರದು. ಸಾಹಿತ್ಯ ಮನುಷ್ಯನನ್ನು ಒಂದು ಗೂಡಿಸುವಂತದಾಗಬೇಕು. ದೇಶದ ಸ್ವಾಭಿಮಾನ ಮತ್ತು ಹೆಮ್ಮೆ ಭೌತಿಕ ಸೌಕರ್ಯಗಳಿಂದ ಅಳೆಯ ಬಾರದು. ದೇಶದ ಸ್ವಾಭಿಮಾನ ಮತ್ತು ಘನತೆಗೆ ಸಾಹಿತ್ಯ ಅಳತೆಗೋಲು ಆಗಬೇಕು ಎಂದರು. ಕೊಡಗು ವಿಶ್ವವಿದ್ಯಾಲಯ ಉಪಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಎಂಬುದು ಶಿಕ್ಷಣದಿಂದ ಮಾತ್ರ ಸಾಧ್ಯ. ಮೌಲ್ಯಯುತ ಶಿಕ್ಷಣವೇ ಇಂದಿನ ಅಗತ್ಯ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜದ ಕನಸು ಕಂಡಿದ್ದರು ಎಂದರು.

ಗ್ಯಾರAಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮಾನವ ಪ್ರೀತಿ ಮತ್ತು ಮಾನವ ಐಕ್ಯತೆಗೆ ಸಾಹಿತ್ಯಗಳು ನೆರವಾಗಿವೆ. ಸಾಹಿತ್ಯಗಳು ನಮ್ಮನ್ನು ಉತ್ತಮ ಸಮಾಜದೆಡೆಗೆ ಕೈಹಿಡಿದು ನಡೆಸಿ ಕೊಂಡು ಹೋಗುತ್ತದೆ ಎಂದರು. ಹರೀಶ್ ಮಾಗಲುರವರ ಪರಿವರ್ತನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ಅರ್ಜುನ್ ಮೌರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ. ರಮ್ಯ ಬಿಡುಗಡೆಗೊಂಡ ಕೃತಿಯ ವಿಮರ್ಶೆ ನಡೆಸಿಕೊಟ್ಟರು. ಮೋಹನ್ ಮೌರ್ಯ ಗೌರವಾರ್ಪಣೆ ನೆರವೇರಿಸಿದರು. ಡಾ. ಹೇಮಂತ್, ಡಾ. ಝಮೀರ್ ಅಹಮದ್ ಹಾಗೂ ಪಿ.ಕೆ. ಅಬ್ದುಲ್ ರೆಹಮಾನ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪ್ರತಿಮಾ ರೈ ವಂದಿಸಿದರು.