ವೀರಾಜಪೇಟೆ, ಮೇ ೨ : ಕೊಡಗು ಜಿಲ್ಲೆ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿದ್ದು ಜಿಲ್ಲಾದ್ಯಂತ ಸಂಚರಿಸಿದರೆ ನಾವು ಒಲಂಪಿಕ್ನಲ್ಲಿ ಇದ್ದೆವೇನೊ ಎಂಬ ಭಾವನೆ ಮೂಡುತ್ತದೆ. ಅಷ್ಟೊಂದು ಕ್ರೀಡೆಗಳು ಕ್ರೀಡೆಯ ತವರಿನಲ್ಲಿ ನಡೆಯುತ್ತಿವೆ ಎಂಬುವುದು ಹೆಮ್ಮೆಯ ವಿಚಾರ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿಯ ಎಸ್.ಎಂ.ಎಸ್ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಬಾಳೆಕುಟ್ಟಿರ ಕುಟುಂಬದ ವತಿಯಿಂದ ಆಯೋಜಿಸಿದ್ದ ೪ ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕೇರ್ಬಲಿ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿನ ಕ್ರೀಡಾಕೂಟಗಳು ಹಬ್ಬದ ವಾತಾವರಣ ಸೃಷ್ಠಿಸುತ್ತದೆ. ಇಲ್ಲಿ ಸೇರುವ ಜನರಲ್ಲಿ ಪ್ರೀತಿ ವಿಶ್ವಾಸ ಸಾಮರಸ್ಯ ಬೆಸೆಯುತ್ತದೆ. ಕ್ರೀಡಾ ಸ್ಫೂರ್ತಿಯನ್ನು ಬೆಳೆಸುತ್ತದೆ. ಸೋಲನ್ನು ಗೆಲುವೆಂದು ಪರಿಗಣಿಸಿದರೆ ಮುಂದೆ ಆ ಗೆಲವು ನಿಮ್ಮದೆ ಆಗಬಹುದು. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿಯಲ್ಲಿ ವಿಶ್ವದಾಖಲೆ ಬರೆದಿದ್ದು ಕೊಡವ ಕುಟುಂಬಗಳ ಹಗ್ಗಜಗ್ಗಾಟ ಬುಕ್ ಅಫ್ ಕರ್ನಾಟಕ ದಾಖಲೆ ಬರೆದಿದ್ದು ಮುಂದೆ ವಿಶ್ವ ದಾಖಲೆಯಾಗಿ ಕೊಡಗಿನ ಕ್ರೀಡೆಗೆ, ಕೊಡಗಿಗೆ ಹೆಸರು ತರಲಿ ಎಂದು ಪೊನ್ನಣ್ಣ ಆಶಿಸಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮೈದಾನದ
(ಮೊದಲ ಪುಟದಿಂದ) ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆ ಸದಾ ಮನುಷ್ಯನಲ್ಲಿರುವ ಸಂಬAಧವನ್ನು ಗಟ್ಟಿಗೊಳಿಸುತ್ತದೆ ಮತ್ತು ಅವರಲ್ಲಿರುವ ಪ್ರೀತಿ ಪ್ರೇಮವನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತದೆ. ಕೊಡಗಿನಲ್ಲಿ ಕುಟುಂಬ ಕುಟುಂಬಗಳ ನಡುವಿನ ಪಂದ್ಯಾಟವು ತಮ್ಮ ತಮ್ಮಲ್ಲಿ ಉತ್ತಮ ಬಾಂಧವ್ಯವನ್ನು ಬೆಸೆಯಲು ಸಹಕಾರಿಯಾಗುತ್ತಿದೆ. ಇದರಿಂದ ಅನೇಕ ಯುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆತು ಮುಂದೆ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಂದು ಗ್ರಾಮೀಣ ಮಟ್ಟದಲ್ಲಿ ಸ್ಥಳಿಯ ಬಾಳೆಕುಟ್ಟಿರ ಕುಟುಂಬ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಹಬ್ಬವನ್ನು ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಇಂತಹ ಕ್ರೀಡಾ ಕೂಟಗಳಿಂದ ಬೇಧಭಾವಗಳನ್ನು ತೊರೆದು ಸಾಮರಸ್ಯ ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಪಾಂಡAಡ ಕುಟ್ಟಣಿಯವರ ೯೭ರಲ್ಲಿ ಚಾಲನೆ ಗೊಳಿಸಿದ ಹಾಕಿ ಹಬ್ಬ ಇಂದು ಎಲ್ಲಾ ಭಾಷಿಕ ಜನಾಂಗದವರು ಕ್ರೀಡಾ ಹಬ್ಬವನ್ನು ಆಯೋಜಿಸುವಂತಾಗಿದೆ ಅದೇ ರೀತಿ ಏಳು ಸಾವಿರ ವರ್ಷದ ಇತಿಹಾಸವಿರುವ ಈ ಹಗ್ಗಜಗ್ಗಾಟ ಅಂತರರಾಷ್ಟಿçÃಯ ಮಟ್ಟದ ಪಂದ್ಯಾಟವಾಗಿದೆ. ಇಂದು ೨೮೨ ಕೊಡವ ಕುಟುಂಬಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಹಾಕಿಯಂತೆ ಈ ಪಂದ್ಯಾಟದಲ್ಲಿ ಹೆಚ್ಚಿನ ಕುಟುಂಬಗಳು ಮುಂದೆ ಭಾಗವಹಿಸಲಿ ಎಂದರು.
ಹಗ್ಗಾಜಗ್ಗಾಟ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ ಸೋಮಣ್ಣ, ಕೊಡಗು ರೈತ ಸಂಘಧ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಟುಂಬದ ಅಧ್ಯಕ್ಷ ಬಾಳೆಕುಟ್ಟಿರ ಎಂ ಮಂದಣ್ಣ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕರಾದ ಕಾಣತಂಡ ಬೀನಾ ಜಗದೀಶ್, ಹಿರಿಯರಾದ ಬಾಳೆಕುಟ್ಟಿರ ಬಿ.ಎ ದಮಯಂತಿ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಡಿಕೇರಿ-ವೀರಾಜಪೇಟೆ ಮುಖ್ಯ ರಸ್ತೆಯಿಂದ ಅರಮೇರಿ ಮಠದವರೆಗೆ ಬಾಳೆಕುಟ್ಟಿರ ಕುಟುಂಬದ ವತಿಯಂದ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಬಾಳೆಕುಟ್ಟಿರ ಕುಟುಂಬದ ಹೆಣ್ಣು ಮಕ್ಕಳಿಂದ ಸ್ವಾಗತ ನೃತ್ಯ, ಬೇಗೂರು ಪೊಳೆಮಾಡ್ ಈಶ್ವರ ಸಂಘದ ವತಿಯಿಂದ ಉಮ್ಮತ್ತಾಟ್ ಮತ್ತು ಕೋಲಾಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಾಳೆಕುಟ್ಟಿರ ಕುಟುಂಬದ ಉಪಾಧ್ಯಕ್ಷ ತಿಮ್ಮಯ್ಯ ಸ್ವಾಗತಿಸಿದರು ಹಾಗೂ ಬಾಳೆಕುಟ್ಟಿರ ಕಲ್ಪನ ಕಾರ್ಯಪ್ಪ ವಂದಿಸಿದರು. ಆರಂಭಿಕ ನಾಪೋಕ್ಲು ಮತ್ತು ಮಡಿಕೇರಿ ಕೊಡವ ಸಮಾಜ ಹೆಣ್ಣು ಮಕ್ಕಳ ನಡುವಿನ ಹಗ್ಗಜಗ್ಗಾಟ ಮತ್ತು ಕೊಡವ ಭಾಷಿಕ ಜನಾಂಗವಾದ ಐರೀರ ಮತ್ತು ಹೆಗ್ಗಡೆ ಸಮಾಜದ ನಡುವಿನ ಪ್ರದರ್ಶನ ಪಂದ್ಯಾಟ ಏರ್ಪಟ್ಟಿತು.