ಮಡಿಕೇರಿ, ಏ. ೩೦: ಕನ್ನಡ ಚಲನಚಿತ್ರ ನಟ, ಸ್ಪೂರ್ತಿಯ ಮಾತುಗಾರ ಮುಳ್ಯ ಸಂಸ್ಥೆಯ ಅಂಬಾಸಿಡರ್ ಆಗಿರುವ ರಮೇಶ್ ಅರವಿಂದ್ ತಾ.೨Àರಂದು ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಿಗ್ಗೆ ೧೦:೩೦ ಗಂಟೆಗೆ ಮಹದೇವಪೇಟೆಯಲ್ಲಿ ತೆರೆಯಲಾಗಿರುವ ಮುಳಿಯ ಸಂಸ್ಥೆಯ ಬೆಳ್ಳಿ ಆಭರಣಗಳ ಮಳಿಗೆ ಸಿಲ್ವರಿಯವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಳಿಯ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇವರೊಂದಿಗೆ ಬಡಕಿಲ ಪ್ರದೀಪ್ ಕೂಡ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಶಾಖೆಯ ಪ್ರಬಂಧಕ ತೀತಿಮಾಡ ಸೋಮಣ್ಣ, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ್ ಇದ್ದರು.