ಮಡಿಕೇರಿ: ಮಕ್ಕಳಲ್ಲಿ ಶಿಸ್ತು ಸಜ್ಜನಿಕೆ ಸರಳತೆ ಬೆಳೆಯಲು ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಿದೆ. ಮಕ್ಕಳ ಮೊದಲ ಗುರುಗಳಾಗಿರುವ ಪೋಷಕರು ಸದಾ ಮಕ್ಕಳಿಗೆ ಸ್ಫೂರ್ತಿಯಾಗಿರಬೇಕು ಎಂದು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಹೇಳಿದ್ದಾರೆ.
ನಗರದ ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಚಿದ್ವಿಲಾಸ್, ಪೋಷಕರಿಂದ ಸ್ಫೂರ್ತಿ ಪಡೆದ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರಲ್ಲದೇ, ನೀರಿನ ಮಹತ್ವದ ಅರಿವು, ಮೊಬೈಲ್‌ನ ದುಷ್ಪರಿಣಾಮ, ಪ್ಲಾಸ್ಟಿಕ್ ಬಳಕೆಯ ತೊಂದರೆಗಳ ಬಗ್ಗೆ ಪ್ರೇರಣದಾಯಕ ವಾದ ಮಾತುಗಳನ್ನು ಹೇಳಿದರು.
ಗೌರವ ಅತಿಥಿಯಾಗಿ ಆಗಮಿಸಿದ ರಾಷ್ಟಿçÃಯ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕಿ ಡಾ. ಪುಷ್ಪ ಕುಟ್ಟಣ್ಣ ಮಾತನಾಡಿ, ಶಾಲಾ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳು ಕೂಡ ತುಂಬಾ ಅವಶ್ಯಕ.
ಕೊಡಗು ವಿದ್ಯಾಲಯ ಸಹ ಇದಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಕಳೆದ ೨೦ ದಿನಗಳಿಂದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ೨೬೦ಕ್ಕೂ ಹೆಚ್ಚಿನ ಮಕ್ಕಳು ತಾವು ಕಲಿತ ವಿಭಿನ್ನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ರೀತಿಯ ಕಲಾಕೃತಿಗಳ ಪ್ರದರ್ಶನ ಕೂಡ ಆಯೋಜಿತ ವಾಗಿತ್ತು. ಪ್ರಾಂಶುಪಾಲೆ ಸುಮಿತ್ರ ಕೆ.ಎಸ್. ಮಾತನಾಡಿ, ಈ ಬಾರಿಯ ಶಿಬಿರ ಯಶಸ್ವಿಯಾಗಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕೊಡುಗೆ ಅಪಾರ.
೨೬೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ತುಂಬು ಆಸಕ್ತಿ ಹಾಗೂ ಲವಲವಿಕೆಯಿಂದ ಪಾಲ್ಗೊಂಡಿದ್ದು ಕಾರಣವಾಗಿದೆ ಎಂದರಲ್ಲದೇ ಇಂತಹ ಹಲವು ಶಿಬಿರಗಳನ್ನು ಭವಿಷ್ಯದಲ್ಲಿ ಆಯೋಜಿಸಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಸೇರಿದಂತೆ ಶಾಲಾ ಶಿಕ್ಷಕ ವೃಂದ ಸಿಬ್ಬಂದಿಗಳು, ಪೋಷಕರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಲಕ್ಷ್ಯ ಪೊನ್ನಕ್ಕ ಹಾಗೂ ಸುದೀಕ್ಷ ನಿರೂಪಿಸಿ, ವರ್ಣ ಭೋಜಮ್ಮ ಸ್ವಾಗತಿಸಿ, ಶ್ರೀಯ ಕಿರಣ್ ಅತಿಥಿಗಳನ್ನು ಪರಿಚಯಿಸಿದ ಕಾರ್ಯಕ್ರಮದಲ್ಲಿ ಸಾನ್ಯ ವಂದಿಸಿದರು.ಶನಿವಾರಸAತೆ: ಪಟ್ಟಣದ ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಓರ್ವ ಶಿಕ್ಷಕಿ ಹಾಗೂ ಇಬ್ಬರು ಸಹಾಯಕಿಯರನ್ನು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡ ಲಾಯಿತು. ಬೆಳ್ಳಾರಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ೪೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಮಾಕ್ಷಿ, ಮೂದರವಳ್ಳಿ ಅಂಗನವಾಡಿ ಕೇಂದ್ರದಲ್ಲ್ಲಿ ಸಹಾಯಕಿಯಾಗಿ ೨೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಭಾಗ್ಯಮ್ಮ ಹಾಗೂ ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ೧೭ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉಮಾವತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗುಡುಗಳಲೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಜಯಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಬದುಕು-ಬವಣೆ ಬಗ್ಗೆ ಅನಿಸಿಕೆ ಹಂಚಿಕೊAಡರು. ಸನ್ಮಾನಿತರು ಮಾತನಾಡಿ, ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕಿ ಗಂಗಮ್ಮ ಮಾತನಾಡಿದರು. ಶಿಕ್ಷಕಿ ಧನಲಕ್ಷಿö್ಮ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶನಿವಾರಸಂತೆ ವೃತ್ತ ವ್ಯಾಪ್ತಿಯ ೧೮ ಅಂಗನವಾಡಿ ಕೇಂದ್ರಗಳ ಎಲ್ಲಾ ಶಿಕ್ಷಕಿಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು. ಶಿಕ್ಷಕಿ ಸುಮಿತ್ರಾ ವಂದಿಸಿದರು.ಕೂಡಿಗೆ: ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ೨೦೨೪-೨೫ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಸಲಾಯಿತು.
ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಹತ್ವ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಸರ್ಕಾರಿ ಶಾಲೆಗಳಲ್ಲಿ ಸಮುದಾಯವನ್ನು ಶಾಲೆಯ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶ ಇದಾಗಿದ್ದು, ಪೋಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.
ಪೋಷಕರೊಂದಿಗೆ ಸಮಾಲೋಚನೆ ನಡೆಸಿದ ಶಾಲೆಯ ಮುಖ್ಯ ಶಿಕ್ಷಕಿ ಕೆ.ಡಿ. ನವೀನ ಮಾತನಾಡಿ, ಪೋಷಕರು ಮಕ್ಕಳ ಕಲಿಕಾ ಪ್ರಗತಿಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.
ಮಾರ್ಗದರ್ಶಕ ಅಧಿಕಾರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿಯ ಶಿಕ್ಷಕ ಹೆಚ್.ಬಿ. ದಿನೇಶಾಚಾರಿ ಮಾತನಾಡಿ, ಪೋಷಕರು ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಯೊಂದಿಗೆ ಶಾಲಾ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಿಂದ ಮಕ್ಕಳ ದಾಖಲಾತಿ ಯೋಜನೆಯಡಿ ತೆರಳಿದ್ದ ಪ್ರೌಢಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಕೆ.ಟಿ. ಸೌಮ್ಯ, ಪ್ರಾಥಮಿಕ ಶಾಲಾ ಶಿಕ್ಷಕರಾದ ಹೆಚ್.ಸಿ. ಬಸವರಾಜ್, ಮಂಗಳಗೌರಿ, ಅತಿಥಿ ಶಿಕ್ಷಕಿ ಬಿ.ಜಿ. ಶಶಿಕಲಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪೊನ್ನAಪೇಟೆ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪ್ರಶಸ್ತಿಯನ್ನು ವೀರಾಜಪೇಟೆ ಸಮೀಪದ ಗುಂಡಿಕೆರೆ ಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದು ಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಷ್ಟಿ ಯೋಜನೆಯಡಿ ಸಮೀಕ್ಷೆ ಕೈಗೊಂಡು ಇಡೀ ಜಿಲ್ಲೆಯಲ್ಲಿ ಆಯ್ಕೆಗೊಂಡಿರುವ ಒಟ್ಟು ಮೂರು ಶಾಲೆಯ ಎಸ್‌ಡಿಎಂಸಿ ಪೈಕಿ ವೀರಾಜ ಪೇಟೆ ತಾಲೂಕಿನಿಂದ ಆಯ್ಕೆಗೊಂಡ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಏಕೈಕ ಶಾಲೆಯಾಗಿದೆ. ಸರಕಾರಿ ಶಾಲೆಗಳನ್ನು ಮತ್ತು ಎಸ್‌ಡಿಎಂಸಿಗಳನ್ನು ಪ್ರೋತ್ಸಾಹಿಸಲು ಸರಕಾರ ಪ್ರಶಸ್ತಿ ಘೋಷಿಸಿತ್ತು. ಇದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾ ವಾಹಿನಿ ಪೋರ್ಟಲ್ ನಲ್ಲಿ ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ಎಸ್‌ಡಿಎಂಸಿಗಳ ಸಮೀಕ್ಷೆಯನ್ನು ಆಯೋಜಿಸಿ ಇದರಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಇದರಂತೆ ಸಮೀಕ್ಷೆಯ ಅಂತಿಮ ಘಟ್ಟದಲ್ಲಿ ದೊರೆಯುವ ಗರಿಷ್ಠ ಅಂಕಗಳ ಆಧಾರದಲ್ಲಿ ಜಿಲ್ಲಾವಾರು ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಆಯ್ಕೆಗೊಂಡಿರುವ ಗುಂಡಿಕೆರೆ ಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ರೂ. ೧ ಲಕ್ಷ ಮೊತ್ತದ ಬಹುಮಾನವನ್ನು ಇಲಾಖೆ ಬಿಡುಗಡೆಗೊಳಿಸಿದೆ. ಬಹುಮಾನದ ಮೊತ್ತವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಶಾಲೆಯ ಮೂಲಭೂತ ಸೌಕರ್ಯಗಳಿಗೆ ಮಾತ್ರ ಬಳಸಿಕೊಳ್ಳ ಬೇಕೆಂಬ ಇಲಾಖೆಯ ನಿರ್ದೇಶನ ದಂತೆ ಶಾಲೆಗೆ ನೂತನವಾಗಿ ಲ್ಯಾಪ್ಟಾಪ್, ಗ್ರೀನ್ ಬೋರ್ಡ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ಖರೀದಿಸ ಲಾಗಿದೆ. ಬಹುಮಾನದ ಮೊತ್ತದಲ್ಲಿ ಖರೀದಿಸಲಾಗಿರುವ ಲ್ಯಾಪ್ಟಾಪ್‌ಅನ್ನು ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಮೀತಲತಂಡ ಎಂ. ಇಸ್ಮಾಯಿಲ್ ಅವರು ಶಾಲೆಯ ಮುಖ್ಯ ಶಿಕ್ಷಕಿ ಸೀತಾ ಅವರಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಇಸ್ಮಾಯಿಲ್, ಮೊದಲಿ ನಿಂದಲೂ ಗುಣಮಟ್ಟದ ಶಿಕ್ಷಣದ ಮೂಲಕ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿ ಗಮನ ಸೆಳೆದಿದೆ. ಈ ಕಾರಣದಿಂದ ಖಾಸಗಿ ಶಾಲೆಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದು ನಿಂತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಇಚ್ಛಾಶಕ್ತಿಯೊಂದಿದ್ದರೆ ಸರ್ಕಾರಿ ಶಾಲೆಯನ್ನು ಸರ್ವತೋ ಮುಖವಾಗಿ ಅಭಿವೃದ್ಧಿಗೊಳಿಸ ಬಹುದು ಮತ್ತು ಪೋಷಕರನ್ನು ಆಕರ್ಷಿಸಬಹುದು ಎಂಬುದಕ್ಕೆ ಈ ಸರಕಾರಿ ಶಾಲೆ ಉತ್ತಮ ಮಾದರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾರ್ಗ ದರ್ಶಕ ಶಿಕ್ಷಕರಾಗಿ ಆಗಮಿಸಿದ ವೀರಾಜಪೇಟೆಯ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಶಿಕ್ಷಕಿ ಸೀತ, ಎಸ್‌ಡಿಎಂಸಿ ಸದಸ್ಯರಾದ ವನಿತಾ ಕುಮಾರ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತಿಮ್ಮಯ್ಯ, ಸಹ ಶಿಕ್ಷಕರಾದ ಶ್ರೀನಿವಾಸ್, ಸುಜಾತ ಮೊದಲಾದವರು ಉಪಸ್ಥಿತರಿದ್ದರು.ವೀರಾಜಪೇಟೆ: ಮೈಸೂರು ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ವೀರಾಜಪೇಟೆಯ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜು ತಂಡ ಫೈನಲ್ ಪಂದ್ಯ ಆಡುವುದರ ಮೂಲಕ ಒಂದೇ ವಿದ್ಯಾಸಂಸ್ಥೆಯ ಎ ಹಾಗೂ ಬಿ ತಂಡಗಳು ಫೈನಲ್ ಹಣಾಹಣಿಯಲ್ಲಿ ಆಡಿದ ಇತಿಹಾಸ ಸೃಷ್ಟಿಮಾಡಿದೆ. ಒಟ್ಟು ೧೬ ತಂಡಗಳು ಭಾಗವಹಿಸಿದ್ದ ರಾಜ್ಯಮಟ್ಟದ ೫ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ೪-೧ ಗೋಲುಗಳ ಅಂತರದಲ್ಲಿ ವೀರಾಜ ಪೇಟೆ ಪದವಿಪೂರ್ವ ಕಾಲೇಜನ್ನು ಸೋಲಿಸಿ ಗೆಲುವನ್ನು ಸಾಧಿಸಿತು. ಇದಕ್ಕೂ ಮೊದಲು ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ತಂಡವು ಸೆಪಿಯೆಂಟ್ ಕಾಲೇಜಿನ ಬಿ. ತಂಡವನ್ನು ೬-೨, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿ ತಂಡವನ್ನು ೫-೨, ಸೆಂಟ್ ಜೋಸೆಫ್ ಕಾಲೇಜಿನ ಎ ತಂಡವನ್ನು ೫-೩ ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ಇನ್ನೊಂದು ಕಡೆ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ತಂಡವು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎ ತಂಡವನ್ನು ೪-೧, ಸೆಪಿಯೆಂಟ್ ಕಾಲೇಜಿನ ಎ. ತಂಡವನ್ನು ೫-೪, ಸೆಂಟ್ ಅಲೋಶಿಯಸ್ ಕಾಲೇಜನ್ನು ೫-೨ ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮವಾಗಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ನಡುವೆ ನಡೆದ ವಿರೋಚಿತ ಪಂದ್ಯದಲ್ಲಿ ಪದವಿ ಕಾಲೇಜಿನ ತಂಡವು ೪-೧ ಗೋಲಿನ ಅಂತರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ತಂಡವನ್ನು ಸೋಲಿಸುವ ಮೂಲಕ ಜಯ ಸಾಧಿಸಿ ರೂ. ೧೫,೦೦೦ ನಗದು, ವಿನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನ ಪಡೆದ ಕಾವೇರಿ ಪದವಿಪೂರ್ವ ಕಾಲೇಜಿನ ತಂಡ ರೂ. ೧೦,೦೦೦ ನಗದು, ರನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕ ಪಡೆದುಕೊಂಡಿದೆ. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾವೇರಿ ಪದವಿ ಕಾಲೇಜಿನ ತಕ್ಷಕ್ ಬಿದ್ದಪ್ಪ ಪಡೆದರೆ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪದವಿಪೂರ್ವ ಕಾಲೇಜಿನ ಬಾಲಚಂದ್ರನ್ ಪಡೆದುಕೊಂಡರು.ಕಾಲೇಜಿನ ನಡುವೆ ನಡೆದ ವಿರೋಚಿತ ಪಂದ್ಯದಲ್ಲಿ ಪದವಿ ಕಾಲೇಜಿನ ತಂಡವು ೪-೧ ಗೋಲಿನ ಅಂತರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ತಂಡವನ್ನು ಸೋಲಿಸುವ ಮೂಲಕ ಜಯ ಸಾಧಿಸಿ ರೂ. ೧೫,೦೦೦ ನಗದು, ವಿನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನ ಪಡೆದ ಕಾವೇರಿ ಪದವಿಪೂರ್ವ ಕಾಲೇಜಿನ ತಂಡ ರೂ. ೧೦,೦೦೦ ನಗದು, ರನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕ ಪಡೆದುಕೊಂಡಿದೆ. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾವೇರಿ ಪದವಿ ಕಾಲೇಜಿನ ತಕ್ಷಕ್ ಬಿದ್ದಪ್ಪ ಪಡೆದರೆ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪದವಿಪೂರ್ವ ಕಾಲೇಜಿನ ಬಾಲಚಂದ್ರನ್ ಪಡೆದುಕೊಂಡರು.ಬಿ.ಸಿ. ಪ್ರಕಾಶ್‌ಗೆ ಪಿ.ಹೆಚ್.ಡಿ. ಪದವಿ
ಮಡಿಕೇರಿ: ವೀರಾಜಪೇಟೆ ತಾಲೂಕಿನ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಿ.ಸಿ. ಪ್ರಕಾಶ್ ಅವರು ಪಿ.ಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ಮುಕ್ತ ಗಂಗೋತ್ರಿಯಲ್ಲಿ “ಕೊಡಗಿನ ಹಾಲೇರಿ ವಂಶದ ಅರಸರು ಮತ್ತು ವೀರಶೈವ ಮಠಗಳ ನಡುವಿನ ಸಂಬAಧಗಳ ಚಾರಿತ್ರಿಕ ಅಧ್ಯಯನ” ಎಂಬ ಮಹಾ ಪ್ರಬಂಧವನ್ನು ಇತಿಹಾಸ ವಿಷಯ ಕ್ಷೇತ್ರದಲ್ಲಿ ಮಂಡಿಸಿರುವುದರಿAದ ಪಿ.ಹೆಚ್.ಡಿ. ಪದವಿಗಾಗಿ ಘೋಷಿಸಲಾಗಿದೆ. ಇವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ಇದರ ಸಹ ಪ್ರಾಧ್ಯಾಪಕ ಡಾ. ವಿ.ಎಂ. ರಮೇಶ್ ಮಾರ್ಗದರ್ಶನ ನೀಡಿದ್ದರು.ಸುಂಟಿಕೊಪ್ಪ: ಮಾದಾಪುರ ಎಸ್‌ಜೆಎಂ ಶಾಲೆಯ ವತಿಯಿಂದ ೪೦ ದಿನಗಳ ಬೇಸಿಗೆ ಶಿಬಿರಕ್ಕೆ ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಯವರು ಚಾಲನೆ ನೀಡಿದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ. ಇದರಿಂದ ಸಾಕಷ್ಟು ಶಿಕ್ಷಣ ಸೇರಿದಂತೆ ಸಾಮಾಜಿಕ ಉತ್ತಮ ವಿಚಾರದಾರೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತಾಗಬೇಕೆAದರು.
ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್, ಕಬಡ್ಡಿ, ಶಾಸ್ತಿçÃಯ ನೃತ್ಯ ಮತ್ತು ಇನ್ನಿತರ ಮನೋರಂಜನಾ ಆಟೋಟ ತರಬೇತಿಯನ್ನು ನೀಡಲಾಗುವುದು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಪ್ರಿಯಾ, ಪ್ರಜ್ಞಾ, ನಿವೇದಿತಾ, ಜೂರ, ಲವ್ಯ, ಅಂಕಿತ, ಧನ್ಯ, ಆದಿರಾ, ಸಂಸ್ಥೆಯ ವಿಚಾರಕ ಅನಿಶ್ ಹಾಗೂ ಶಿಬಿರಾರ್ಥಿಗಳು ಇದ್ದರು.ಮುಳ್ಳೂರು: ಸಮೀಪದ ಆಲೂರು-ಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೇಮಾನಂದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಎಸ್.ಕೆ. ಉದಯ್ ಕಾರ್ಯಕ್ರಮದ ಉದ್ದೇಶದ ಕುರಿತು ಮಾಹಿತಿ ನೀಡಿದರು.
ಸರಕಾರಿ ಪ್ರೌಢಶಾಲಾ ಶಿಕ್ಷಕಿ ಶುÈತಿ ವಿದ್ಯಾರ್ಥಿಗಳ ಪತ್ರಿಕೆಯನ್ನು ಪರಿಶೀಲಿಸಿ ನಂತರ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಶಾಲೆಗೆ ಗೇಟ್ ನಿರ್ಮಿಸಿಕೊಟ್ಟ ದಾನಿ ಮತ್ತು ಆಲೂರು-ಸಿದ್ದಾಪುರ ಗ್ರಾ.ಪಂ. ಸದಸ್ಯೆ ಹಂಚೆಟ್ಟಿರ ದಮಯಂತಿ ಕರುಂಬಯ್ಯ ಅವರು ಇದನ್ನು ಉದ್ಘಾಟಿಸಿದರು. ಪ್ರೌಢಶಾಲಾ ಶಿಕ್ಷಕ ಜವರಯ್ಯ, ಸಿದ್ದಪ್ಪಾಜಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಶಿಕ್ಷಕಿ ಪ್ರಭಾಮಣಿ ಹಾಜರಿದ್ದರು.ಚೆಯ್ಯಂಡಾಣೆ: ಕುಂಜಿಲ ಗ್ರಾಮದ ಕೆ.ಪಿ. ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶಾಲೆಯ ಮುಖ್ಯ ಶಿಕ್ಷಕಿ ಪಿ.ಕೆ. ಗಂಗಮ್ಮ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಕುಂಜಿಲ ಕೆ.ಪಿ. ಬಾಣೆ ಶಾಲೆಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮನವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭ ಮಡಿಕೇರಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಮಡಿಕೇರಿ ತಾಲೂಕು ಬಿ.ಆರ್.ಪಿ. ಮಂಜುಳಾ ಚಿತ್ರಾಪುರ, ಕಕ್ಕಬೆ ಕ್ಲಸ್ಟರ್ ಸಿ.ಆರ್.ಪಿ. ಕಲ್ಪನಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸಫಿಯಾ, ಎಸ್ ಡಿಎಂಸಿ ಸದಸ್ಯರುಗಳು, ಕಕ್ಕಬ್ಬೆ ಕ್ಲಸ್ಟರ್‌ಗೆ ಒಳಪಡುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಕೆ.ಪಿ. ಬಾಣೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು, ಶಾಲಾ ಶಿಕ್ಷಕರು, ಪೋಷಕರು, ಮತ್ತಿತರರು ಹಾಜರಿದ್ದರು.ಐಗೂರು: ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆಯನ್ನು ನೀಡಿದರು.ಸುಂಟಿಕೊಪ್ಪ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಈರ್ವರು ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಶಾಲಾಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಯನ್ನು ಮಾಡುವ ಮೂಲಕ ಪೋಷಕರಿಗೆ, ಶಿಕ್ಷಣದ ಶಾಲೆಗೆ ಹಾಗೂ ಊರಿಗೆ ಡಿಂಪಲ್ ತಿಮ್ಮಯ್ಯ ಸಿ.ಎನ್. ೫೯೧ ಅಂಕ ಶೇ. ೯೮.೦೫ ಪಡೆಯುವ ಮೂಲಕ ರಾಜ್ಯದಲ್ಲಿ ೯ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದರೆ ಮತೋರ್ವ ವಿದ್ಯಾರ್ಥಿನಿ ಸೃಜನ ಡಿ.ಡಿ. ೫೮೭ ಶೇ. ೯೭.೮೩ ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದ ಇವರುಗಳನ್ನು ಕೀರ್ತಿ ಪಾತಕೆಯನ್ನು ಏರಿಸಿದ್ದಾರೆಂದು ಸಂತ ಮೇರಿ ಸಂಯುಕ್ತ ಕಾಲೇಜಿನ ವ್ಯವಸ್ಥಾಪಕ ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭ ರಾಜ್ಯಕ್ಕೆ ೯ನೇ ಸ್ಥಾನ ಪಡೆದ ಡಿಂಪಲ್ ತಿಮ್ಮಯ್ಯ ಸಿ.ಎನ್. ೫೯೧ ಅಂಕ ಶೇ. ೯೮.೦೫ ಹಾಗೂ ಜಿಲ್ಲೆಯಲ್ಲಿ ೩ನೇ ಸ್ಥಾನ ಪಡೆದ ಸೃಜನ ಡಿ.ಡಿ. ೫೮೭ ಶೇ. ೯೭.೮೩ ಅವರನ್ನು ಗೌರವಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸೆಲ್ವರಾಜ್ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಇದ್ದರು.ವೀರಾಜಪೇಟೆ: ವೀರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ.ಎನ್. ಲಾವಣ್ಯ ಬೋರ್ಕರ್ ಅÀವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸದ್ಭಾವನಾ ರಾಷ್ಟçಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರು ಭರತನಾಟ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ಸಂಸ್ಥೆಯ ವತಿಯಿಂದ ಮೈಸೂರಿನ ಸಾಹಸಸಿಂಹ ಸಭಾಂಗಣ ಡಾ. ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿವಿಧ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಾವಣ್ಯ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.