ಮಡಿಕೇರಿ, ಏ. ೩೦ : ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ತಾ. ೧ರಂದು (ಇಂದು) ಶಾಂತಿಯುತ ಪಂಜಿನ ಮೆರವಣಿಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಶ್ರೀ ಕೋದಂಡರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಅವರು, ಕಾಶ್ಮೀರದಲ್ಲಿ ನಡೆದಿರುವ ಘಟನೆ ದೇಶಕ್ಕೆ ದುರಂತವೆAದು ಹೇಳಬಹುದು. ಭಾರತೀಯರಾದ ನಾವೆಲ್ಲರೂ ಇಂತಹ ಘಟನೆಯನ್ನು ಒಕ್ಕೊರಲಿ ನಿಂದ ಖಂಡಿಸಿ ಹೋರಾಟಕ್ಕೆ ಕೇಂದ್ರ ಸರಕಾರದೊಂದಿಗೆ ಕೈಜೋಡಿಸಬೇಕು ಎಂದರು.
ನೆರೆಯ ಪಾಕಿಸ್ತಾನದೊಂದಿಗೆ ಪ್ರತಿನಿತ್ಯ ಘರ್ಷಣೆ ಆಗುತ್ತಲೇ ಇದೆ. ಇದನ್ನು ಕೊನೆಗಾಣಿಸಬೇಕಾದರೆ ಯುದ್ಧ ಆಗಬೇಕಿದೆ. ಇದೀಗ ನಮ್ಮ ಶಕ್ತಿ ಪ್ರದರ್ಶನಕ್ಕೆ ಕಾಲ ಕೂಡಿ ಬಂದಿದ್ದು, ೧೫೦ ಕೋಟಿ ಜನಸಂಖ್ಯೆ ಇರುವ ಭಾರತ ೬ ರಿಂದ ೭ ಕೋಟಿ ಸಂಖ್ಯೆಯಲ್ಲಿರುವ ಪಾಕಿಸ್ತಾನಕ್ಕೆ ಹೆದರಿಕೊಂಡು ಇರುವಂತಾಗಬಾರದು ಈ ನಿಟ್ಟಿನಲ್ಲಿ ಭಯೋತ್ಪಾದನೆ ಕೊನೆಗೊಳಿಸಲು ಪ್ರಧಾನಿ ಮೋದಿಯವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಘಟನೆಯನ್ನು ಖಂಡಿಸಿ ತಾ. ೧ರಂದು ಸಂಜೆ ೬ ಗಂಟೆಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂದಿರಾ ಗಾಂಧಿ
(ಮೊದಲ ಪುಟದಿಂದ)ವೃತ್ತದಿAದ ಜ. ತಿಮ್ಮಯ್ಯ ವೃತ್ತದವರೆಗೆ ಶಾಂತಿಯುತ ಪಂಜಿನ ಮೆರವಣಿಗೆ ಏರ್ಪಡಿಸಲಾಗಿದೆ. ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂಘಟಿತ ಧ್ವನಿಯನ್ನು ಪ್ರಚಾರ ಮಾಡಲಾಗುವುದು ಎಂದು ಹೇಳಿದರು.
ನೀಮಾ ಸಂಘಟನೆಯ ಅಧ್ಯಕ್ಷ ಡಾ. ರಾಜಾರಾಂ ಮಾತನಾಡಿ, ಇಂತಹ ಸಂದರ್ಭಗಳಲ್ಲಿ ಭಾರತೀಯರು ಪ್ರತಿಯೋರ್ವರೂ ಮನೆಯಿಂದ ಹೊರಬಂದು ಪ್ರತಿಭಟಿಸಬೇಕು. ೨೬ ಮಂದಿ ಅಮಾಯಕರ ಹತ್ಯೆಯಾಗಿದ್ದು, ಎಲ್ಲರೂ ಜಾತಿ, ಧರ್ಮ, ಮತ, ಬೇಧವಿಲ್ಲದೆ ಭಾರತೀಯರಾಗಿ ಒಗ್ಗೂಡಬೇಕು. ಭಾರತೀಯತೆಯನ್ನು ತೋರಿಸಬೇಕೆಂದು ಮನವಿ ಮಾಡಿದರು. ತಾ. ೧ರಂದು ನಡೆಯಲಿರುವ ಶಾಂತಿಯ ಮೆರವಣಿಗೆಯಲ್ಲಿ ಎನ್‌ಎಂಓ, ಐಎಂಎ, ನೀಮಾ, ರಾಮೋತ್ಸವ ಸಮಿತಿ, ಮಹಿಳಾ ಸಂಘ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ವಿ.ಹಿಂ.ಪ., ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಇಸ್ಕಾನ್, ಮಾಜಿ ಸೈನಿಕರ ಸಂಘ ಸೇರಿದಂತೆ ೧೩ ಸಂಘಟನೆಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎನ್.ಎಂ.ಓ. ವಿದ್ಯಾರ್ಥಿ ಪ್ರಮುಖ ವಿಕ್ರಂ ಶೆಟ್ಟಿ ಮಾತನಾಡಿ, ಇಂತಹ ಕ್ರೂರ ಘಟನೆಗಳು ನಡೆದಾಗ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗಳಲ್ಲಿ ಸ್ಟೇಟಸ್, ಸ್ಟೋರಿ ಹಾಕಿಕೊಂಡು ಒಂದು ದಿನದ ಸಂತಾಪ ಸೂಚಿಸುತ್ತಾರೆ. ನಂತರ ಮರೆತೆ ಬಿಡುತ್ತಾರೆ. ತಳಮಟ್ಟದಲ್ಲಿ ವಿರೋಧಿಸಿ ಕಾರ್ಯೋನ್ಮುಖರಾಗುವುದಿಲ್ಲ. ದೇಶವನ್ನು ಕಟ್ಟಬೇಕಾದರೆ ರಸ್ತೆಗಿಳಿಯಬೇಕಿದೆ. ಜಾಗೃತಿ ಮೂಡಿಸಬೇಕಿದೆ. ದೇಶದಲ್ಲಿ ಇಂತಹ ಎಷ್ಟೋ ವಿಚಾರಗಳಿದ್ದರೂ ಯುವಪೀಳಿಗೆ ಮನರಂಜನೆಯತ್ತ ಮಾತ್ರ ಮುಖ ಮಾಡುತ್ತಿರುವುದು ವಿಪರ್ಯಾಸವೆಂದು ಹೇಳಿದರು.
ಇದೀಗ ಹಮ್ಮಿಕೊಂಡಿರುವ ಪಂಜಿನ ಮೆರವಣಿಗೆಯಲ್ಲಿ ಧ್ವನಿ ಸಾಹಿತಿ ಬಡೆಕಿಲ್ಲ ಪ್ರದೀಪ್ ಭಾಗವಹಿಸಲಿದ್ದು, ಎಲ್ಲರೂ ಕೈಜೋಡಿಸುವುದರೊಂದಿಗೆ ಧ್ವನಿಗೂಡಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಕಾರ್ಯದರ್ಶಿ ಉಣ್ಣಿಕೃಷ್ಣ, ಕೋದಂಡರಾಮ ರಾಮೋತ್ಸವ ಸಮಿತಿ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ನ ಯೋಗೇಶ್ ಇದ್ದರು.