ಮಡಿಕೇರಿ, ಏ. ೩೦ : ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ನೇತೃತ್ವದಲ್ಲಿ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾಯದ ಕ್ರೀಡೋತ್ಸವ - ಸಮ್ಮಿಲನ - ೨೦೨೫ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿತು. ಮೊದಲ ದಿನ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕ್ರೀಡಾಜ್ಯೋತಿಯನ್ನು ನಿವೃತ್ತ ಯೋಧ ಕೆ.ಎಂ. ಚಿನ್ನಪ್ಪ ಉದ್ಘಾಟಿಸಿದರು. ಬಳಿಕ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ, ಉಪಾಧ್ಯಕ್ಷ ಕೆ. ದಾಮೋದರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಖಜಾಂಚಿ ಕೆ.ಎಸ್. ಗಿರೀಶ್ ಮಡಿಕೆಬೀಡು ಮತ್ತು ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕುಲಾಲ ಕುಂಬಾರ ಸಮಾಜದವರು ಮೆರವಣಿಗೆಯಲ್ಲಿ ಸಾಗಿ ಬಂದು ಮೈದಾನದಲ್ಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ದ.ಕ. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು ಇವರ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭ ವಾಗುವ ಮಹಿಳಾ ಹಾಸ್ಟೆಲ್ನಲ್ಲಿ ಕೊಡಗಿನ ಮಹಿಳಾ ಕುಲಬಾಂಧ ವರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ಮಂಗಳೂರು ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ, ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ (ಮೊದಲ ಪುಟದಿಂದ) ಮಾತೃ ಸಂಘದ ಸೇವಾದಳಪತಿ ಪ್ರದೀಪ್ ಅತ್ತಾವರೆ, ಮಂಗಳೂರು ಸಾಮಾಜಿಕ ಕಾರ್ಯಕರ್ತ ಕಿರಣ್ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾಯದ ಪುರುಷರ ಕ್ರಿಕೆಟ್ ಪಂದ್ಯಾಟ ಜರುಗಿತು. ಎರಡನೇ ದಿನ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾಯದವರ ಆಟೋಟ ಸ್ಪರ್ಧೆಗಳು ನಡೆದವು. ಕೊಡಗು ಜಿಲ್ಲಾ ಕುಲಾಲ ಸಂಘದ ಜಿಲ್ಲಾಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುತ್ತಮ್ಮ ಉಪಸ್ಥಿತರಿದ್ದರು. ಸಂಸದ ಯದುವೀರ್ ಒಡೆಯರ್ ಮಾತನಾಡಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾದ ಕುಂದುಕೊರತೆಗಳಿಗೆ ನೆರವಾಗುತ್ತೇನೆ ಎಂದು ಹೇಳಿದರು. ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ ಕೊಡಗಿನ ಕುಲಾಲ ಕುಂಬಾರ ಸಮುದಾಯದ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ತು ರಾಜಾಧ್ಯಕ್ಷ ಡಾ. ಎಂ.ಪಿ. ವರ್ಷ ಮಾತನಾಡಿ ಕುಂಬಾರಿಕೆಯ ಮತ್ತು ಕುಂಬಾರರ ಇತಿಹಾಸವನ್ನು ವಿವರಿಸಿದರು. ಐಎಎಸ್, ಐಪಿಎಸ್ ಮಾಡಲು ಆಸಕ್ತಿ ಇರುವ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾಯದ ಮಕ್ಕಳಿಗೆ ತನ್ನ ಕಡೆಯಿಂದ ರೂ. ೨೫ ಸಾವಿರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರಾದ ರೇಣುಕಾಂಬ ಅವರು ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮುದಾಯದ ಒಗ್ಗಟ್ಟು ಸಮಾಜಕ್ಕೆ ಮಾದರಿ ಎಂದು ಶ್ಲಾಘಿಸಿದರು.ದಾವಣಗೇರೆ ಸರ್ವಜ್ಞ ಸಂಶೋಧನಾ ಪೀಠದ ಅಧ್ಯಕ್ಷ ಮಂಜಪ್ಪ ಶರಣರು ದಾವಣಗೆರೆ ಇವರು ಕೊಡಗಿನ ಸರ್ವಜ್ಞ ಸಂಶೋಧನಾ ಪೀಠದಿಂದ ಕುಲಬಾಂಧವರಿಗೆ ನೀಡುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕೆ.ಎಂ. ಚಿನ್ನಪ್ಪ ಅವರು ಮಾತನಾಡಿ, ಕೊಡಗಿನ ಕುಲಾಲ ಕುಂಬಾರ ಸಮುದಾಯದದವರು ಒಗ್ಗಟ್ಟಾಗಿ ಸಂಘಟಿತರಾಗಬೇಕೆAದರು. ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಡನ್ನು ಹಾಡಿ ರಂಜಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೆ. ಕುಶಾಲಪ್ಪ ಮೂಲ್ಯ ಮಾತನಾಡಿ, ಸರಳತೆ ಸಮಾನತೆ ಮಾನವೀಯತೆಯ ಮೂಲಕ ಜಿಲ್ಲಾ ಸಂಘವು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕುಲಾಲ ಕುಂಬಾರರಿಗಾಗಿ ಹಲವು ರೀತಿಯ ಯೋಜನೆಗಳು ಸಂಘದ ಮುಂದಿದೆ. ಅದನ್ನು ಕಾರ್ಯಗತಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ಸತೀಶ್ ಸಂಪಾಜೆ, ವೆಂಕಟೇಶ್ ಉಪಸ್ಥಿತರಿದ್ದರು.
ನವೀನ್ ಕುಲಾಲ್ ಪುತ್ತೂರು ನಿರೂಪಿಸಿ, ಯಶಸ್ವಿನಿ ಪ್ರಾರ್ಥಿಸಿದರು. ರಮೇಶ್ ಮಡಿಕೆಬೀಡು ಸ್ವಾಗತಿಸಿದರು. ಹೇಮಲತಾ ಪ್ರಕಾಶ್ ವಂದಿಸಿದರು. ಎರಡು ದಿನಗಳ ಕ್ರೀಡೋತ್ಸವ ಸಮ್ಮಿಲನ ಕಾರ್ಯಕ್ರಮದ ಕ್ರೀಡಾಧಿಕಾರಿಯಾಗಿ ಕೆ.ಡಿ. ಶಾಂತಕುಮಾರ್ ಮಡಿಕೆಬೀಡು, ಆಹಾರ ಸಮಿತಿ ಮುಖ್ಯಸ್ಥರಾಗಿ ಸುರೇಶ್ ಕುಲಾಲ್ ಮಡಿಕೇರಿ, ಸ್ವಾಗತ ಸಮಿತಿ ಮುಖ್ಯಸ್ಥರಾಗಿ ರಮೇಶ್ ಮಡಿಕೆಬೀಡು ತಂಡ ಕಾರ್ಯನಿರ್ವಹಿಸಿತು.