ಮಡಿಕೇರಿ, ಏ.೩೦: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ ೨೦೧೯ನೇ ಬ್ಯಾಚಿನ ಅವಿರತ ೨೦೨೫ ಘಟಿಕೋತ್ಸವ ಸಮಾರಂಭವು ಬುಧವಾರ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಿತು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಭಗವಾನ್ ಬಿ.ಸಿ.ಅವರು ಮಾತನಾಡಿ, ಈ ಕ್ಷಣವು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ಅತೀವ ಸಂತೋಷ ತಂದಿರುವ ದಿನವಾಗಿದೆ ಎಂದರು.

ಈ ದಿನದವರೆಗೂ ನೀವು ವಿದ್ಯಾರ್ಥಿಗಳಾಗಿದ್ದಿರಿ, ಇಂದಿನಿAದ ವೃತ್ತಿಪರ ವೈದ್ಯರಾಗುತ್ತಿದ್ದಿರ ಎಂದು ತಿಳಿದರು.

ಪದವಿ ಪ್ರಮಾಣ ಪತ್ರ ಪಡೆಯುವುದರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ತಬುದ್ದರಾಗುವುದು ಅತಿಮುಖ್ಯ ಎಂದು ನುಡಿದರು.

ಪ್ರತಿ ವರ್ಷ ೧,೧೫,೦೦೦ ಕ್ಕೂ ಹೆಚ್ಚು ವೈದ್ಯರು ಪದವಿ ಪಡೆದರೂ ಕೂಡ ಪ್ರಸಿದ್ಧ ವೈದ್ಯರಾಗಲು ಕೆಲವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ವೈದ್ಯ ವೃತ್ತಿ ಎಂಬುದು ಕೇವಲ ಪದವಿ ಅಲ್ಲ; ಬದ್ಧತೆ, ಔದಾರ್ಯ ಹಾಗೂ ನಿಷ್ಠೆ ಹೊಂದಿರುವ ಕ್ಷೇತ್ರ ಎಂದು ಭಗವಾನ್ ಹೇಳಿದರು.

ಒಂದು ಮೃದುವಾದ ಮಾತು, ಕಾಳಜಿಯ ಸ್ಪರ್ಶ. ಎಲ್ಲವೂ ಚಿಕಿತ್ಸೆಯಷ್ಟೆ ಪ್ರಾಮುಖ್ಯತೆ ಹೊಂದಿದೆ ಎಂದು ನುಡಿದರು.

ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಸಂಜಯ್ ಜೋಡ್‌ಪೇ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಿಸಿದರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಎ.ಜೆ. ಲೋಕೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಂ. ರೋಹಿಣಿ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ಸೋಮಶೇಖರ್, ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ, ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಇತರರು ಇದ್ದರು.