*ಗೋಣಿಕೊಪ್ಪ, ಏ. ೨೯: ಆಲ್ ಸ್ಟಾರ್ ಯೂತ್ ಕ್ಲಬ್ ವತಿಯಿಂದ ಡ್ರಗ್ಸ್ ಬಿಟ್ಟು ಫುಟ್ಬಾಲ್ ಆಡಿ ಎಂಬ ಸಂದೇಶದೊAದಿಗೆ ಜನ ಜಾಗೃತಿ ಸಂದೇಶ ಜಾಥಾ ನಡೆಯಿತು. ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಜಾಥಾ ಆರಂಭವಾಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂದೇಶ ಸಾರಲಾಯಿತು.

ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ಹಳ್ಳಿಗಟ್ಟು ಸಿಐಟಿ ಕಾಲೇಜು ವಿದ್ಯಾರ್ಥಿಗಳ ತಂಡಗಳ ನಡುವೆ ಸರ್ಕಾರಿ ಶಾಲಾ ಮೈದಾನದಲ್ಲಿ ಪ್ರದರ್ಶನ ಪಂದ್ಯ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡು ವಿಜು ಸುಬ್ರಮಣಿ ಬೆಂಕಿಗೆ ಸಿಗರೇಟ್ ಪ್ಯಾಕ್ ಹಾಕಿ ಸುಡುವ ಮೂಲಕ ಚಾಲನೆ ನೀಡಿದರು. ಮಾದಕ ವ್ಯಸನಕ್ಕೆ ಒಳಗಾದಂತೆ ಎಚ್ಚರವಹಿಸುವ ಸಂದೇಶ ನೀಡಲಾಯಿತು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ. ಎಸ್. ಪೊನ್ನಣ್ಣ ಫುಟ್ಬಾಲ್ ಒದೆಯುವ ಮೂಲಕ ಶುಭ ಕೋರಿದರು. ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಮಾದಕ ವಸ್ತು ತ್ಯಜಿಸಲು ಒತ್ತಾಯಿಸಲಾಯಿತು. ಉದ್ಯಮಿ ತೌಶಕ್ ಮಾದಕ ವಸ್ತುಗಳ ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.

ಆಲ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷ ಸುಧಾಕರ್ ರೈ, ಉಪಾಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಗೌರವ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಶರತ್‌ಕಾಂತ್, ಮುಕ್ತಾರ್ ಬೇಗ್, ಖಜಾಂಚಿ ಸುರೇಶ್, ಜುಮಾ ಮಸೀದಿ ಕಾರ್ಯದರ್ಶಿ ಸಮ್ಮದ್ ಇದ್ದರು.

-ಎನ್.ಎನ್. ದಿನೇಶ್