ವೀರಾಜಪೇಟೆ, ಏ. ೨೯: ಏಡ್ಸ್ ಎಂಬುದು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ನಾವು ಇಡುವಂತಹ ತಪುö್ಪ ಹೆಜ್ಜೆಯ ಮೂಲಕ ಮಾರಕ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಹೇಳಿದರು.

ಕೊಡಗು ಜಿಲ್ಲೆ ಏಡ್ಸ್ ನಿಯಂತ್ರಣ ಘಟಕ ಹಾಗೂ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಘಟಕದ ವತಿಯಿಂದ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಏಡ್ಸ್ ಕುರಿತ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದು, ಮಾನವನ ಅಜಾಗರೂಕತೆ ಹಾಗೂ ಅತಿ ಆಸೆತನದ ಪರಿಣಾಮವಾಗಿ ಯಾವುದೋ ಪ್ರಾಣಿಗಳ ದೇಹದಲ್ಲಿ ಇದ್ದಂತಹ ವೈರಸ್ ಮಾನವನ ದೇಹವನ್ನು ಸೇರಿದೆ. ತದ ನಂತರ ಇದು ಮಾನವ ಸಂಕುಲದಲ್ಲಿ ಗಣನೀಯವಾಗಿ ಪಸರಿಸಲು ಆರಂಭವಾಯಿತು. ಆರಂಭದ ಕಾಲದಲ್ಲಿ ಈ ಕಾಯಿಲೆ ಬಂದAತಹ ಸಂದರ್ಭ ಆ ವ್ಯಕ್ತಿಗೆ ಸಾವನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗವಿರಲಿಲ್ಲ. ಆದರೆ ಇದೀಗ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದಿ ಎಚ್.ಐ.ವಿ ಏಡ್ಸ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ದೇಹದಲ್ಲಿ ಕಾಯಿಲೆಯು ಉಲ್ಬಣವಾಗದಂತೆ ನಿಯಂತ್ರಣದಲ್ಲಿರುವ ಔಷಧಿಯನ್ನು ಕಂಡು ಹಿಡಿದಿದ್ದಾರೆ. ಈ ಕಾಯಿಲೆಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ಯುವ ಸಮುದಾಯ. ಆದರಿಂದ ಯುವಜನತೆಗೆ ಏಡ್ಸ್ ಕುರಿತ ಹೆಚ್ಚಿನ ಮಾಹಿತಿಯನ್ನು ನೀಡಿ ಅವರ ಮೂಲಕ ಏಡ್ಸ್ನ ಕುರಿತ ಜಾಗೃತಿಯನ್ನು ಸಮುದಾಯದಲ್ಲಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಘಟಕದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಎಚ್‌ಐವಿ ಏಡ್ಸ್ನ ಉಗಮ ವಿಕಾಸ, ಎಚ್‌ಐವಿ ಏಡ್ಸ್ ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಹರಡುತ್ತದೆ, ರೋಗದ ಲಕ್ಷಣಗಳು, ರೋಗ ಉಲ್ಬಣವಾಗದಂತಿರುವAತಹ ಚಿಕಿತ್ಸಾ ಪದ್ಧತಿ, ಎಚ್‌ಐವಿ ಬಾದಿತರ ರಕ್ಷಣೆಗೆ ಇರುವಂತಹ ಕಾನೂನು ಹಾಗೂ ಸರಕಾರದ ಸವಲತ್ತು, ಎಚ್‌ಐವಿ ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿಕೊಟ್ಟರು.

ನಂತರ ವಿದ್ಯಾರ್ಥಿಗಳಿಗೆ ನಡೆಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ ರಶೀದ ಪ್ರಥಮ ಹಾಗೂ ಪ್ರಥಮ ಬಿ.ಎ. ಆದಿತ್ಯ ದ್ವಿತೀಯ ಸ್ಥಾನ, ಭಾಷಣ ಸ್ಪರ್ಧೆ ದ್ವಿತೀಯ ಬಿ.ಕಾಂ ರಕ್ಷಿತಾ ಪ್ರಥಮ ಹಾಗೂ ಮುತ್ತಮ್ಮ ದ್ವಿತೀಯ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ ರಕ್ಷಿತಾ ಪ್ರಥಮ ಹಾಗೂ ಪ್ರಥಮ ಬಿ.ಎ ದೀಕ್ಷಾ ದ್ವಿತೀಯ ಸ್ಥಾನ, ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಿ.ಕಾಂ ಬಿಂದ್ಯ ಪ್ರಥಮ ಸ್ಥಾನ ಹಾಗೂ ದ್ವಿತೀಯ ಬಿ.ಕಾಂ ಮುತ್ತಮ್ಮ ದ್ವಿತೀಯ ಸ್ಥಾನ ಪಡೆದರು.

ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಮುಖ್ಯಸ್ಥ ನಾಗರಾಜು, ಎನ್‌ಎಸ್‌ಎಸ್ ಯೋಜನಾಧಿಕಾರಿ ಸುನಿಲ್ ಹಾಜರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಂಬಿಕ, ಅಕ್ಷಿತಾ ನಾಯ್ಕ್, ನಿರ್ಮಿತ, ಬೊಜಮ್ಮ ಹಾಗೂ ವಿದ್ಯಾರ್ಥಿ ವರ್ಗ ಹಾಜರಿದ್ದರು.