ಮಡಿಕೇರಿ, ಏ.೨೯ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಮೇರಾ ಯುವ್ ಭಾರತ್ (ಒಙ ಃhಚಿಡಿಚಿಣ) ಪ್ಲಾಟ್‌ಫಾರ್ಮ್ ಮೂಲಕ ಯುವಕರಿಗಾಗಿ ಒಂದು ವಿಶಿಷ್ಟ ದೇಶ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.

ವಿಕಸಿತ್ ಭಾರತ್ ವೈಬ್ರಂಟ್ ವಿಲೇಜಸ್ ಎಂಬ ಹೆಸರಿನಲ್ಲಿ ಪರಿಚಿತವಾಗಿರುವ ಈ ಕಾರ್ಯಕ್ರಮವು ಮೇ ೧೫ ರಿಂದ ಮೇ ೩೦ ರವರೆಗೆ ಲೇಹ್ ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಗಡಿಭಾಗದ ಗ್ರಾಮಗಳಲ್ಲಿ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆಯ್ಕೆಗೊಂಡ ಯುವಕರು ಈ ಗ್ರಾಮಗಳಲ್ಲಿ ೧೦ ದಿನಗಳು ವಾಸವಿದ್ದು, ಸ್ಥಳೀಯ ಸಂಸ್ಕöÈತಿ, ಸಮುದಾಯಗಳೊಂದಿಗೆ ಸಂವಹನ ಮಾಡಿ, ಗ್ರಾಮೀಣಾಭಿವೃದ್ಧಿಯನ್ನು ಅಧ್ಯಯನ ಮಾಡಿ, ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ೧೫ ಯುವಕರನ್ನು ಆಯ್ಕೆ ಮಾಡಲಿದ್ದು, ೨೧ ರಿಂದ ೨೯ ವರ್ಷದೊಳಗಿನ ಆಸಕ್ತ ಯುವಕರು ಮೇ ೩ ರ ಒಳಗಾಗಿ hಣಣಠಿs://mಥಿbhಚಿಡಿಚಿಣ.gov.iಟಿ ಲಿಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ವೈದ್ಯಕೀಯ ಪ್ರಮಾಣಪತ್ರ, "ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾಕೆ ಇಚ್ಛಿಸುತ್ತೇನೆ?" ಎಂಬ ವಿಷಯವನ್ನು ೫೦೦ ಪದಗಳನ್ನು ಮೀರದ ಪ್ರಬಂಧ ರೂಪದಲ್ಲಿ ಇಂಗ್ಲಿಷ್, ಹಿಂದಿ ಅಥವಾ ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಬೇಕು. ಪ್ರಬಂಧ ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನು ಒಂದು ಪಿಡಿಎಫ್ (Pಆಈ) ಫೈಲ್ ಆಗಿ ಸಂಯೋಜಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್‌ಲೋಡ್ ಮಾಡಬೇಕು. ಯುವಕಾರ್ಯ, ಗ್ರಾಮೀಣಾಭಿವೃದ್ಧಿ, ಸಾಂಸ್ಕöÈತಿಕ ವಿನಿಮಯ ಮತ್ತು ದೇಶ ನಿರ್ಮಾಣದ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನೆಹರು ಯುವ ಕೇಂದ್ರ, ಯುವಕಕ್ಲಬ್, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಸ್ವಯಂಸೇವಕರಿಗೆ ಆದ್ಯತೆ ನೀಡಲಾಗುತ್ತದೆ, ಈ ಅವಕಾಶವನ್ನು ಜಿಲ್ಲೆಯ ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಪಿ.ಪಿ.ಸುಕುಮಾರ್ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಮಡಿಕೇರಿ, (೯೯೬೧೩೩೨೯೬೮) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.