ಮಡಿಕೇರಿ, ಏ. ೨೯ : ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳದಲ್ಲಿ ೮ ವರ್ಷ ೨ ತಿಂಗಳ ಕಾಲ ಸೇವೆ ಸಲ್ಲಿಸಿದ್ದ ‘ಪೃಥ್ವಿ’ ಎಂಬ ಶ್ವಾನವು ಹೃದಯಾಘಾತದಿಂದ ಮೃತಪಟ್ಟಿದೆ. ಈ ಶ್ವಾನವು ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ ೩ ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ ೫ ಬಹುಮಾನವನ್ನು ಪಡೆದಿತ್ತು.
ಚೆಕ್‌ಪೋಸ್ಟ್ಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಟದ ಪತ್ತೆ ಕರ್ತವ್ಯವನ್ನು ನಿರ್ವಹಿಸಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ವಿಐಪಿ ಮತ್ತು ವಿವಿಐಪಿಗಳ ಭೇಟಿ ಸಂದರ್ಭ ಸ್ಪೋಟಕ
(ಮೊದಲ ಪುಟದಿಂದ) ವಸ್ತುಗಳ ಪತ್ತೆ ಹಾಗೂ ಭದ್ರತಾ ಕರ್ತವ್ಯವನ್ನು ನಿರ್ವಹಿಸಿತ್ತು.
ಏರ್ ಶೋ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭ, ರಾಷ್ಟçಪತಿ ಭೇಟಿ ಸಂದರ್ಭ ಸ್ಪೋಟಕ ವಸ್ತುಗಳ ಪತ್ತೆ ಕರ್ತವ್ಯದಲ್ಲೂ ಭಾಗಿಯಾಗಿತ್ತು. ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ, ಮತ್ತು ಲಕ್ಷದ್ವೀಪಗಳಲ್ಲಿ ಪ್ರಧಾನಮಂತ್ರಿಗಳ ಭೇಟಿ ಸಂದರ್ಭ ಸ್ಪೋಟಕ ವಸ್ತುಗಳ ಪತ್ತೆ ಕರ್ತವ್ಯದಲೂ ಭಾಗಿಯಾಗಿತ್ತು. ಎಹೆಚ್‌ಸಿ ಎಂ.ಆರ್. ಶಿವ ಅವರು ‘ಪೃಥ್ವಿ’ಯ ಹ್ಯಾಂಡ್ಲರ್ ಆಗಿದ್ದರು.
’ಪೃಥ್ವಿ’ಗೆ ಕೊಡಗು ಜಿಲ್ಲಾ ಪೊಲೀಸ್‌ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಪರವಾಗಿ ಎಸ್ಪಿ ಕೆ. ರಾಮರಾಜನ್ ಅಂತಿಮ ಗೌರವ ವಂದನೆ ಸಲ್ಲಿಸಿದರು.