ಮಡಿಕೇರಿ, ಏ. ೨೯: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಪಾದಚಾರಿಯ ಸಾವಿಗೆ ಕಾರಣನಾದ ಚಾಲಕನನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾ. ೨೬.೦೪೨೦೨೫ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಗದಾಳು ಗ್ರಾಮದ ರಸ್ತೆಯ ಬಳಿ ಕಡಗದಾಳುವಿನ ಸೀನಾ (೪೦) ಎಂಬವರಿಗೆ ಕಾರು (ಕೆಎ೦೫ - ಎಂಕ್ಯೂ ೨೬೭೨) ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ
ತಾ. ೨೯.೦೪.೨೦೨೫ ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.