ಸುಂಟಿಕೊಪ್ಪ, ಏ. ೨೯: ಟಿ.ಸಿ.ಎಲ್. ತೋಟದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಯೋರ್ವರಿಗೆ, ಆಶಾ ಕಾರ್ಯಕರ್ತೆ ಜ್ಯೋತಿ ಭಾಸ್ಕರ್ ಅವರು ನೆರವಿನ ಹಸ್ತ ನೀಡಿದರು.

ಟಿ.ಸಿ.ಎಲ್. ತೋಟದಲ್ಲಿ ಕಾರ್ಮಿಕರಾಗಿರುವ ಸುಜಾತ ಎಂಬವರ ಪುತ್ರ ಜೀವನ್ ಎಂಬಾತ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ಮಧುಮೇಹ ಪರೀಕ್ಷಾ ಯಂತ್ರವನ್ನು ನೀಡಿದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಜ್ಯೋತಿ ಭಾಸ್ಕರ್ ಪ್ರತಿ ತಿಂಗಳು ಆರೈಕೆಗೆ ಸಹಾಯಹಸ್ತ ನೀಡುವುದಾಗಿ ಹೇಳಿದರು.