ಮಡಿಕೇರಿ, ಏ. ೨೯: ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೩೧ನೇ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಮಾಂದಲ್‌ಪಟ್ಟಿಗೆ ಚಾರಣವನ್ನು ಆಯೋಜಿಸಲಾಗಿತ್ತು.
ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕುಂಜಿಲ ಗ್ರಾಮದ ಕೋಟೆರ ಎನ್. ಮುದ್ದಯ್ಯ ಅವರ ನೇತೃತ್ವದಲ್ಲಿ ನಡೆದ ಚಾರಣದಲ್ಲಿ ಶಿಬಿರಾರ್ಥಿ ಪುಟಾಣಿಗಳು, ಪೋಷಕರು, ಶಿಕ್ಷಕರು ಹಾಗೂ ಆಯೋಜಕರು ಸೇರಿದಂತೆ ೧೫೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಹಸಿರ ಪರಿಸರದಲ್ಲಿ ಸಂತೋಷದಿAದ ಭಾಗಿಯಾಗಿ ಉತ್ತಮ ಅನುಭವ ಪಡೆದುಕೊಂಡರು. ಕಾಲೂರಿನಿಂದ ಮಾಂದಲ್‌ಪಟ್ಟಿವರೆಗೆ ಕಾಲ್ನಡಿಗೆಯಲ್ಲೇ ತಲುಪಿ ಸಂಭ್ರಮಿಸಿದ ವಿದ್ಯಾರ್ಥಿಗಳು ನಂತರ ಹಟ್ಟಿಹೊಳೆಯ ಆವಂಡಿ ಜಲಪಾತಕ್ಕೆ ತೆರಳಿ ಪ್ರಕೃತಿ ಸೌಂದರ್ಯದ ನಡುವೆ ನೀರಿನಲ್ಲಿ ಮಿಂದೆದ್ದರು.
೨೦ ಕಿ.ಮೀ. ದೂರದ ಚಾರಣದಲ್ಲಿ ಎಲ್.ಕೆ.ಜಿ.ಯಿಂದ ೧೬ ವರ್ಷದ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದ ಸಂಘಟಕರಾದ ಬಾಬು ಸೋಮಯ್ಯ, ಶ್ಯಾಮ್ ಪೂಣಚ್ಚ, ಕುಡೆಕಲ್ ಸಂತೋಷ್, ಮಹೇಶ್ ಕುಮಾರ್, ವೆಂಕಟೇಶ್, ಲೋಕೇಶ್ ನಾಯ್ಡು, ಬಿದ್ದಂಡ ನರೇನ್ ಬೆಳ್ಯಪ್ಪ ಮತ್ತಿತÀರರು ಪಾಲ್ಗೊಂಡಿದ್ದರು.
ಶಿಬಿರಾರ್ಥಿಗಳಿಗೆ ಪ್ರತಿದಿನ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತಮ ಹಾಗೂ ನುರಿತ ತರಬೇತುದಾರರಿಂದ ಯೋಗ, ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್, ಡ್ರಾಯಿಂಗ್ ಮತ್ತು ಪೇಯಿಂಟಿAಗ್ ತರಬೇತಿ ನೀಡಲಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಈ ರೀತಿಯ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಂತೆ ಕೋಟೆರ ಎನ್. ಮುದ್ದಯ್ಯ ಮನವಿ ಮಾಡಿದರು.
ಮೇ ೧ ರಂದು ಸಮಾರೋಪ
ಮಾರ್ಚ್ ೨೫ ರಿಂದ ಆರಂಭಗೊAಡ ಶಿಬಿರದ ಸಮಾರೋಪ ಸಮಾರಂಭ ಮೇ ೧ ರಂದು ಬೆಳಿಗ್ಗೆ ೮.೩೦ ಗಂಟೆಗೆ ನಡೆಯಲಿದ್ದು, ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಎನ್. ಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.