ವೀರಾಜಪೇಟೆ, ಏ. ೨೮: ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ಮೇ, ೧೮ ರಂದು ಮಾಯಮುಡಿ ಶಾಲಾ ಮೈದಾನ ದಲ್ಲಿ ಸಮಾಜಬಾಂಧವರಿಗೆ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಸಮಾಜದ ಅಧ್ಯಕ್ಷ ಎನ್.ಎಮ್.ರಾಜೇಶ್ ತಿಳಿಸಿದರು.

ವೀರಾಜಪೇಟೆ ಸಮಾಜದ ಕಚೇರಿಯ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವ ಜಯಂತಿ ಅಂಗವಾಗಿ ಮೇ. ೧೮ರಂದು ಸಮಾಜ ಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದ್ದು. ನಂತರ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ವೇದಿಕೆ ಕಾರ್ಯಕ್ರಮದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ ಮುಂದಿನ ೫ ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಎಸ್.ಸುರೇಶ್ ಅವರನ್ನು ತಾಲೂಕು ವೀರಶೈವ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್, ತಾಲೂಕು ಉಪಾಧ್ಯಕ್ಷ ರಘು ಶ್ರೀಕಂಠಪ್ಪ, ಕಾರ್ಯದರ್ಶಿ ವೇದಾಜಯರಾಜು, ಎಸ್.ಎಲ್. ಮಹದೇವಪ್ಪ, ಎಸ್.ಅರ್.ರಮೇಶ್, ಈಶಕುಮಾರ್, ಎಸ್.ಎನ್.ಮಹೇಶ್, ಲೋಕೇಶ್, ಅಶ್ವಿನ್, ರಾಜಶೇಖರ್, ನಾಗಮ್ಮ, ಉಪಸ್ಥಿತರಿದ್ದರು. ಎನ್.ಎಂ.ರಾಜೇಶ್ ಸ್ವಾಗತಿಸಿದರೆ, ರಘು ಶ್ರೀಕಂಠಪ್ಪ ವಂದಿಸಿದರು.