ಮಡಿಕೇರಿ, ಏ. ೨೮: ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವಜನ ಸಂಘ, ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಪಾಲಿಬೆಟ್ಟ ಯೂನಿಟ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಬದರ್ ಮೌಲಿದ್ ಮಜ್ಲಿಸ್‌ನ ೧೨ನೇ ವಾರ್ಷಿಕೋತ್ಸವ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮ ವನ್ನು ಕೆ.ಎಂ.ಜೆ. ಪಾಲಿಬೆಟ್ಟ ಯೂನಿಟ್ ಅಧ್ಯಕ್ಷ ಕುಂಜ್ಞಿ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಪಾಲಿಬೆಟ್ಟ ಜುಮಾ ಮಸ್ಜಿದ್ ಖತೀಬರಾದ ಝುಬೈರ್ ಸಖಾಫಿ ಉದ್ಘಾಟಿಸಿದರು. ಖ್ಯಾತ ಮದ್ಹ್ ಗಾಯಕ ಹಾಫಿಳ್ ಸ್ವಾದಿಖ್ ಅಲಿ ಫಾಳಿಲಿ ಗೂಡಲ್ಲೂರು ನೇತೃತ್ವದಲ್ಲಿ ರಬೀಹ್ ಮುಈನಿ, ಶಮ್ಮಾಸ್ ಕಾಂತಪುರA ಮುಂತಾದ ಮದ್ಹ್ ಗಾಯಕರು ಸೇರಿದಂತೆ ಧಾರ್ಮಿಕ ಪಂಡಿತರ ಬುರ್ದಾ ಮಜ್ಲಿಸ್ ನಡೆಯಿತು. ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಸೇರಿದಂತೆ ಉಮರಾ-ಉಲಮಾ, ಧಾರ್ಮಿಕ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ಪಾಲಿಬೆಟ್ಟ ಯುನಿಟ್ ಸಮಿತಿಗಳ ಆಶ್ರಯದಲ್ಲಿ ೬ನೇ ವರ್ಷದ ಉಚಿತ ಮುಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ೪೫ ಮಕ್ಕಳು ಇದರ ಸದುಪಯೋಗ ಪಡೆದುಕೊಂಡರು.