ಶನಿವಾರಸಂತೆ, ಏ. ೨೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜಾಮೀಯ ಮಸೀದಿ ಹಾಗೂ ಸರ್ವ ಮುಸ್ಲಿಂ ಸಮುದಾಯದವರು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ಕೃತ್ಯ ಖಂಡಿಸಿ ಭಾನುವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಹೊಸೂರು ಮಸೀದಿಯ ಧರ್ಮಗುರು ಶಾಫಿ ಸಾದಿಕ್ ಮಾತನಾಡಿ, ಪವಿತ್ರವಾದ ಬೃಹತ್ ಸಂವಿಧಾನವನ್ನು ಹೊಂದಿದ ಭಾರತ ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟç. ಅಖಂಡ ಭಾರತದ ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶನಿವಾಸಂತೆ ಜಾಮೀಯ ಮಸೀದಿ ಅಧ್ಯಕ್ಷ ರಿಸಾಲತ್ ಪಾಶ, ಮದೀನ ಮಸೀದಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಮಲ್ ಪಾಶ, ಜಾಮೀಯ ಮಸೀದಿ ಸದಸ್ಯರಾದ ರಿಯಾಜ್, ಸಾದಿಕ್, ಹನೀಫ್, ಕಲೀಂ, ಬಾಶಾ, ಜಮೀಲ್, ಸೈದುಸಾಬ್, ಅಮೀರ್ ಸಾಬ್, ಮುಸ್ಲಿಂ ಜಮಾಅತ್‌ನ ಮುಖ್ಯಸ್ಥರು, ಮುಸ್ಲಿಂ ಸಮುದಾಯದವರು ಹಾಜರಿದ್ದರು.