ಕುಶಾಲನಗರ, ಏ. ೨೬: ವಿಶ್ವ ಸಾಕು ಪ್ರಾಣಿಗಳ ಅಂಗವಾಗಿ ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಮೇ೪ ರಂದು ಸಾಕು ನಾಯಿ ಮತ್ತು ಬೆಕ್ಕುಗಳ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪ್ರಾಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಕೊಡಗು ಜಿಲ್ಲೆಯ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ಎಲ್ಲಾ ನಾಯಿ, ಬೆಕ್ಕಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಚಿತ್ರ ರಮೇಶ್ ೯೩೪೨೨೦೨೪೦೫ ಮತ್ತು ನೇಹಾ ಜಗದೀಶ್ ೯೮೪೫೦೪೪೬೪೫ ಸಂಪರ್ಕಿಸಬಹದಾಗಿದೆ. ಮೊದಲು ಬಂದ ೫೦ ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ೩ ವಿವಿಧ ರೀತಿಯಲ್ಲಿ ಆಯ್ಕೆ ಮಾಡಿ ನಾಯಿ ಮತ್ತು ಬೆಕ್ಕು ವಿಭಾಗದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ಕ್ಲಬ್ನ ಅಧ್ಯಕ್ಷೆ ಚಿತ್ರ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.