ಮಡಿಕೇರಿ, ಏ. ೨೬: ೬೬/೧೧ ಕೆ.ವಿ. ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಎಫ್೧೨ ರಾಜಾಸೀಟ್ ಫೀಡರ್‌ನಲ್ಲಿ ತಾ. ೨೯ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಮಳೆಗಾಲ ಮುಂಜಾಗ್ರತಾ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಮಂಗಳೂರು ರಸ್ತೆ, ತಾಳತ್ತಮನೆ, ಡಿ.ಸಿ. ಕಚೇರಿ, ರಾಜಾಸೀಟ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಇಂದಿರಾನಗರ, ಚಾಮುಂಡೇಶ್ವರಿನಗರ, ಸ್ಟೋನ್ ಹಿಲ್, ಎಲ್.ಐ.ಸಿ. ರಸ್ತೆ, ಹೊಸ ಬಡಾವಣೆ, ರಿಮೈಂಡ್ ಹೋಮ್ ಹಿಂಭಾಗ, ಡೈರಿ ಫಾರಂ, ಎಫ್.ಎಂ.ಸಿ. ಕಾಲೇಜು ರಸ್ತೆ, ಕನ್ನಿಕಾ ಬಡಾವಣೆ, ಮೈತ್ರಿ ಜಂಕ್ಷನ್, ವಿದ್ಯಾನಗರ, ಮುಳಿಯ ಬಡಾವಣೆ, ಹಿಮವನ ಬಡಾವಣೆ, ಕೋರ್ಟ್ ರಸ್ತೆ, ಜಿಲ್ಲಾ ಪಂಚಾಯಿತಿ ಕಟ್ಟಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾ.ವಿ.ಸ.ನಿ.ನಿ. ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.