ಪೊನ್ನಂಪೇಟೆ, ಏ. ೨೬: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ಕಾವೇರಿ ಕಾಲೇಜು ಅಲುಮಿನೈ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ದಿ. ಪುಚ್ಚಿಮಾಡ ತಿಮ್ಮಯ್ಯ, ದಿ. ಪುಚ್ಚಿಮಾಡ ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಪುಚ್ಚಿಮಾಡ ಮೀನಾ ಸುಬ್ಬಯ್ಯ ಅವರ ಜ್ಞಾಪಕಾರ್ಥವಾಗಿ ತಾ. ೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಭಾಷಣ ಸ್ಪರ್ಧೆಯಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವವರಿಗೆ "ಜ್ವಲಂತ ಸಮಸ್ಯೆಗಳಾದ ವಲಸೆ ಕಾರ್ಮಿಕರು ಮತ್ತು ಪರಿಸರ ನಾಶ, ಕೊಡಗನ್ನು ಅಪಾಯದ ಅಂಚಿಗೆ ನೂಕುತ್ತಿದೆಯೇ?" ಎಂಬ ವಿಷಯದ ಬಗ್ಗೆ ಮಾತನಾಡಬೇಕು. ಆಂಗ್ಲ ಭಾಷೆಯಲ್ಲಿ ಮಾತನಾಡುವವರು "Imಠಿಚಿಛಿಣ oಜಿ Soಛಿiಚಿಟ ಒeಜiಚಿ oಟಿ ಈಚಿmiಟಥಿ ಡಿeಟಚಿಣioಟಿshiಠಿ." ಎಂಬ ವಿಷಯದ ಬಗ್ಗೆ ಮಾತನಾಡಬೇಕು ಎಂದು ಕಾವೇರಿ ಕಾಲೇಜು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ ೮೧೯೭೬೧೮೩೦೨ ಸಂಪರ್ಕಿಸಬಹುದು.