ಕೋವರ್ ಕೊಲ್ಲಿ ಇಂದ್ರೇಶ್

ರಾಮನಗರ, ಏ. ೨೬: ಭೂಗತ ಲೋಕದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಯ ತನಿಖೆಯನ್ನು ರಾಮನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸ್ಥಳದಲ್ಲಿ ಸಿಕ್ಕ ಸಾಕ್ಷಾö್ಯಧಾರಗಳ ಆಧಾರದಲ್ಲಿ ರಿಕ್ಕಿ ಮನೆಯ ಕಾವಲು ಉಸ್ತುವಾರಿ ನೋಡಿಕೊಳ್ಳುತಿದ್ದ ಮೋನಪ್ಪ ವಿಠಲ(೫೩) ನನ್ನು ಬಂಧಿಸಿದ್ದಾರೆ. ಮೋನಪ್ಪ ಮೂಲತಃ ಸೋಮವಾರಪೇಟೆ ತಾಲೂಕಿನವನಾಗಿದ್ದು, ರೈ ಯ ಅಂಗರಕ್ಷಕ ಆಗಿ ನೇಮಕಗೊಂಡಿದ್ದ. ಈತನು ರಿಕ್ಕಿ ರೈ ಯನ್ನು ಎತ್ತಿ ಆಡಿಸಿ ಬೆಳೆಸಿದವನೂ ಆಗಿದ್ದಾನೆ. ಈತನಿಗೆ ಹೃದಯ ಸ್ಟಂಟ್ ಆಪರೇಷನ್ ಆಗಿದ್ದ ಹಿನ್ನೆಲೆ ಮತ್ತು ರೈ ಮರಣಾನಂತರ ಮನೆಯ ಕಾವಲಿಗೆ ನೇಮಿಸಲಾಗಿತ್ತು.

ಈತ ರೈ ಕುಟುಂಬದ ನಿಷ್ಟಾವಂತ ಸೇವಕನಾಗಿದ್ದುಕೊಂಡೇ ಕೊಲೆ ಯತ್ನಕ್ಕೆ ಕೈ ಹಾಕಿದ್ದಾನೆಯೇ ಎಂಬುದೇ ಪೊಲೀಸರಿಗೆ ನಿಗೂಢ ರಹಸ್ಯವಾಗಿದೆ. ರೈ ನಿಧನದ ನಂತರ ರಿಕ್ಕಿ ಈತನನ್ನು ಕಡೆಗಣಿಸಿದ್ದನೇ ಅಥವಾ ವಿರೋಧಿಗಳ ಸಂಚಿಗೆ ಸೇರಿ ಹಣ ಪಡೆದು ಕೊಲೆ ಮಾಡಲೆತ್ನಿಸಿದನೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.

ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ರಿಕ್ಕಿಗೆ ಹಾರಿಸಿದ ಮೊದಲ ಗುಂಡು ಸರಿಯಾಗಿ ತಗುಲಲಿಲ್ಲ. ಆಗ ಕಾರಿನಿಂದ ಇಳಿದ ರಿಕ್ಕಿ ಮೇಲೆ ಮತ್ತೊಂದು ಗುಂಡು ಹಾರಿಸಬಹುದಿತ್ತು. ಆದರೆ ಇವನು ಗುಂಡು ಹಾರಿಸದೆ ಮನೆ ಸೇರಿಕೊಂಡಿದ್ದಾನೆ. ಗುಂಡು ತಾಕಿದ ಕೂಡಲೇ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಬೇಕಿತ್ತು. ಆದರೆ ಹಾಗಾಗಿಲ್ಲ; ಈತನೇ ಗುಂಡು ಹಾರಿಸಿರುವುದು ತನಿಖೆಯಲ್ಲಿ ಕಂಡುಬAದಿದೆ.

ಈತನೊಬ್ಬನೇ ಇದ್ದನೇ ಅಥವಾ ಬೇರೆಯವರೂ ಈ ಘಟನೆಯಲ್ಲಿ ಸೇರಿದ್ದಾರೆಯೇ ಎಂಬುದು ತನಿಖೆಯಲ್ಲಿ ತಿಳಿದು ಬರಬೇಕಿದೆ. ಘಟನೆಗೂ ಮುಂಚೆ ಆತ ಮನೆಯಿಂದ ಹೊರಗೆ ಬಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ಈತನೇ ದಾಳಿ ನಡೆಸಿರುವುದು ಖಚಿತವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಪ್ರಕರಣದಲ್ಲಿ ಉಲ್ಲೇಖಿಸಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈನ ಎರಡನೇ ಪತ್ನಿ ಅನುರಾಧ, ರಿಯಲ್ ಎಸ್ಟೇಟ್ ಉದ್ಯಮಿಗಳಾದ ನಿತೇಶ್, ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ನಡುವೆ ರೈ ಹೊಂದಿದ್ದ ಸಂಬAಧ ಕೊನೆಗಾಲದಲ್ಲಿ ಹಳಸಿತ್ತು.

ಮುತ್ತಪ್ಪ ರೈ ವಿರುದ್ಧ ಕಡೆಯ ದಿನಗಳಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಆರೋಪದಡಿ ಮಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಿಧನದ ಬಳಿಕ, ಪತಿ ಆಸ್ತಿಯಲ್ಲಿ ಮೂರನೇ ಒಂದು ಭಾಗಕ್ಕಾಗಿ ಅನುರಾಧ ಕೋರ್ಟ್ ಮೆಟ್ಟಿಲೇರಿದ್ದರು. ದೇವನಹಳ್ಳಿ ಜಮೀನು ಅಭಿವೃದ್ಧಿಗೆ ಸಂಬAಧಿಸಿದAತೆ ನಿತೇಶ್ ಕೂಡ ಕೋರ್ಟ್ ಮೊರೆ ಹೋಗಿದ್ದರು. ಇದೇ ಕಾರಣಕ್ಕೆ ರಿಕ್ಕಿ ಮತ್ತು ನಾಲ್ವರ ನಡುವೆ ಶೀತಲ ಸಮರ ಮುಂದುವರಿದಿತ್ತು ಎನ್ನಲಾಗುತ್ತಿದೆ.

ಎರಡು ಬಾರಿ ಬಿಡದಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ಮಲ್ಲಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾನೆ. ಪೊಲೀಸರೂ ಮಲ್ಲಿ ವಿರುದ್ದ ಸೂಕ್ತ ಸಾಕ್ಷö್ಯವೇನೂ ಸಿಗದ ಹಿನ್ನೆಲೆ ವಿಚಾರಣೆ ಮಾಡಿ ಕಳಿಸಿದ್ದಾರೆ.

ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕೆ. ಶ್ರೀನಿವಾಸ್ ಗೌಡ ಅವರು ಮಾತನಾಡಿ ನಮ್ಮ ತನಿಖೆಯಲ್ಲಿ ಮೋನಪ್ಪನೇ ಗುಂಡು ಹಾರಿಸಿರುವುದು ದೃಢಪಟ್ಟ ನಂತರವೇ ಬಂಧಿಸಲಾಗಿದೆ. ನಮ್ಮ ಬಳಿ ಇದಕ್ಕೆ ಸಂಪೂರ್ಣ ಸಾಕ್ಷಾö್ಯಧಾರಗಳಿವೆ. ತನಿಖೆಯ ವಿವರ ಮಾಧ್ಯಮಗಳಿಗೆ ನೀಡಲಾಗುವುದಿಲ್ಲ ಎಂದು ಹೇಳಿದರು.

ತನಿಖಾ ತಂಡದ ಅಧಿಕಾರಿಯೋರ್ವರ ಪ್ರಕಾರ ಇದೊಂದು ನಕಲಿ ಶೂಟೌಟ್ ಆಗಿದೆ. ಮೊದಲಿಗೆ ರಿಕ್ಕಿ ರೈ ರಾಕೇಶ್ ಮಲ್ಲಿಯನ್ನು ಹಣಿಯಲು ದೇವನಹಳ್ಳಿ ಠಾಣೆಯಲ್ಲಿ ಪೊಲೀಸ್ ದೂರು ನೀಡಲು ಹೋಗಿದ್ದಾನೆ. ಆದರೆ ಸಾಕ್ಷಾö್ಯಧಾರ ಇಲ್ಲದೆ ಬಂಧಿಸಲು ಆಗುವುದಿಲ್ಲ; ಕರೆಸಿ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಶೂಟೌಟ್ ನಾಟಕ ಮಾಡಲಾಗಿದೆ. ಸ್ವಾಮಿನಿಷ್ಠನಾಗಿದ್ದ ಮೋನಪ್ಪನನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವನಿಗೆ ರಾತ್ರಿ ದೃಷ್ಟಿ ದೋಷವೂ ಇದೆ. ಹೀಗಾಗಿ ಕಾರಿನ ಗಾಜಿಗೆ ಹೊಡೆಯುವ ಗುಂಡು ಅಕಸ್ಮಾತ್ ಆಗಿ ರೈಗೆ ತಗುಲಿದೆ. ಈಗಾಗಲೇ ಪೊಲೀಸರು ಅಂಗರಕ್ಷಕರ ೭ ಬಂದೂಕುಗಳನ್ನು ವಶಕ್ಕೆ ಪಡೆದಿದ್ದು, ಎಫ್ ಎಸ್ ಎಲ್ ತನಿಖೆಗೆ ಕಳಿಸಿಕೊಟ್ಟಿದ್ದಾರೆ. ಪ್ರಕರಣದ ತನಿಖೆಯ ಆಳಕ್ಕೆ ಹೋದ ನಂತರವಷ್ಟೇ ಈ ನಿಗೂಢ ಘಟನೆಯ ಪೂರ್ಣ ಚಿತ್ರಣ ದೊರೆಯಲಿದೆ.