ಮಡಿಕೇರಿ, ಏ. ೨೬: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನಾ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನಾ ಕಾರ್ಯಕ್ರಮ ಮೇ ೧ ರಂದು ನಡೆಯಲಿದೆ. ಉತ್ಸವದ ಅಂಗವಾಗಿ ತುಲಾಭಾರ ಸೇವೆ ವಿವಿಧ ಪೂಜಾ ಕಾರ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮೇ ೧ ರಂದು ಬೆಳಿಗ್ಗೆ ೬ ಗಂಟೆಗೆ ಅಭಿಷೇಕ, ಬೆಳಿಗ್ಗೆ ೬.೩೦ ರಿಂದ ೭.೩೦ ಗಂಟೆಗೆ ಗಣಪತಿಹೋಮ, ೮.೩೦ ರಿಂದ ೧೧ ಗಂಟೆಗೆ ರುದ್ರಮಹಾಯಾಗ, ೯.೩೦ ರಿಂದ ೧೦.೩೦ ಗಂಟೆಗೆ ತುಲಾಭಾರ ಸೇವೆ, ೧೧.೩೦ ಗಂಟೆಗೆ ನವ ನಿರ್ಮಿತ ಪೌಳಿಯ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ, ೧೨.೩೦ ಗಂಟೆಗೆ ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.