ವೀರಾಜಪೇಟೆ, ಏ. ೨೭: ಬಾಳೆಕುಟ್ಟಿರ ಕುಟುಂಬದಿAದ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಪುರುಷರು ಹಾಗೂ ಮಹಿಳೆಯರ ಕೇರ್‌ಬಲಿ ನಮ್ಮೆಯಲ್ಲಿ ಒಟ್ಟು ೨೮೨ ಕುಟುಂಬಗಳು ಭಾಗವಹಿಸುತ್ತಿವೆ ಎಂದು ಬಾಳೆಕುಟ್ಟಿರ ಕುಟುಂಬದ ಅಧ್ಯಕ್ಷ ಮಂದಣ್ಣ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕೇರ್‌ಬಲಿ ನಮ್ಮೆಯ ಟೈಸ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅರಮೇರಿಯ ಎ.ಎಂ.ಎಸ್. ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಮೇ ೨, ೩ ಮತ್ತು ೪ ರಂದು ಕೇರ್‌ಬಲಿ ನಮ್ಮೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಫೈನಲ್ ಪಂದ್ಯಾಟ ಮೇ ೪ ರಂದು ನಡೆಯಬೇಕಾಗಿತ್ತು. ಆದರೆ ಮೇ ೪ ರಂದು ಸರ್ಕಾರದ ನೀಟ್ ಪರೀಕ್ಷೆ ಎಸ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ ನಡೆಯುವ ಕಾರಣ ಕೇರ್‌ಬಲಿ ನಮ್ಮೆಯನ್ನು ಮೇ ೧, ೨ ಮತ್ತು ೩ ರಂದು ನಡೆಸಲಾಗುವುದು. ಫೈನಲ್ ಪಂದ್ಯಾಟ ಮೇ ೩ ರಂದು ನಡೆಯಲಿದೆ ಎಂದರು. ಮೇ ೧ ರಂದು ಬೆಳಿಗ್ಗೆ ೧೦ ಗಂಟೆಗೆ ಅರಮೇರಿ ಎಸ್.ಎಂ.ಎಸ್. ವಿದ್ಯಾಪೀಠದ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ ಪರವಾಗಿ ನಾಪೋಕ್ಲು ಕೊಡವ ಸಮಾಜ ಹಾಗೂ ಮಡಿಕೇರಿ ಕೊಡವ ಸಮಾಜಗಳ ನಡುವೆ, ಪುರುಷರ ವಿಭಾಗದಲ್ಲಿ ಎರಡು ಕೊಡವ ಭಾಷಿಕ ಜನಾಂಗಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಸಮಾರೋಪ ಸಮಾರಂಭ ಮೇ ೩ ರಂದು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ನಾಲ್ಕು ವರ್ಷದ ಹಿಂದೆ ಪ್ರಾರಂಭಗೊAಡ ಕೇರ್ ಬಲಿ ನಮ್ಮೆ ಯಶಸ್ವಿಯಾಗಿ ನಡೆಯುತ್ತಿದ್ದು, ೨೦೨೨ರಲ್ಲಿ ಪೊನ್ನೋಲತಂಡ ಕುಟುಂಬ ಕಕ್ಕಬ್ಬೆಯಲ್ಲಿ ಆಯೋಜಿಸಿದ್ದು, ೪೦ ಕುಟುಂಬಗಳು ಭಾಗವಹಿಸಿದ್ದವು. ೨೦೨೩ರಲ್ಲಿ ಟಿ. ಶೆಟ್ಟಿಗೇರಿಯಲ್ಲಿ ಚಟ್ಟಂಗಡ ಕಪ್ ೧೭೭ ಕುಟುಂಬಗಳು, ೨೦೨೪ರಲ್ಲಿ ನಾಪೋಕ್ಲುವಿನಲ್ಲಿ ಬೊಟ್ಟೋಳಂಡ ಕಪ್‌ನಲ್ಲಿ ೨೩೦ ಕುಟುಂಬಗಳು ಭಾಗವಹಿಸಿದ್ದವು. ಈ ಬಾರಿ ಅರಮೇರಿಯಲ್ಲಿ ಬಾಳೆಕುಟ್ಟಿರ ಕಪ್‌ನಲ್ಲಿ ೨೮೨ ಕುಟುಂಬಗಳು ಭಾಗವಹಿಸುತ್ತಿವೆ. ಕೇರ್‌ಬಲಿ ನಮ್ಮೆ ನಡೆಸಲು ಒಟ್ಟು ೧೩ ಕುಟುಂಬಗಳು ಮುಂದೆ ಬಂದಿದ್ದು, ಮುಂದಿನ ವರ್ಷ ಚಿಯಕ್‌ಪೂವಂಡ ಕುಟುಂಬದವರು ನಾಪೋಕ್ಲುವಿನಲ್ಲಿ ನಡೆಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಸಮಿತಿ ಸದಸ್ಯರಾದ ಬಾಳೆಕುಟ್ಟಿರ ಸತ್ಯ ಉತ್ತಯ್ಯ, ರಾಜಾ ಗಣಪತಿ, ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಉಪಾಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ಖಜಾಂಚಿ ಜಮ್ಮಡ ಗಿಲ್, ಜಂಟಿ ಕಾರ್ಯದರ್ಶಿ ಚಟ್ಟಂಗಡ ಕಂಬ ಕಾರ್ಯಪ್ಪ ಉಪಸ್ಥಿತರಿದ್ದರು.