ಮಡಿಕೇರಿ, ಏ. ೨೭: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ಐದು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮಿಟಿ ಯುನೈಟೆಡ್ ಎಫ್.ಸಿ ಗದ್ದೆಹಳ್ಳ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರನ್ನರ್ಸ್ ಪ್ರಶಸ್ತಿಗೆ ಯುನೈಟೆಡ್ ಎಫ್.ಸಿ ಕುಂಜಿಲ ತಂಡ ತೃಪ್ತಿಪಟ್ಟುಕೊಂಡಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಹಣಾಹಣಿಯಲ್ಲಿ ೨೦+೨೦ ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡು ತಂಡಗಳು ಪೈಪೋಟಿ ನಡೆಸಿದರೂ ಕೂಡ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯದ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಸಡನ್ ಡೆತ್‌ನಲ್ಲಿ ೫-೪ ಗೋಲುಗಳ ಅಂತರದಿAದ ಅಮಿಟಿ ಎಫ್.ಸಿ ತಂಡವು ಗೆದ್ದು ಆರನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಇದಕ್ಕೂ ಮೊದಲು ಮೊದಲ ಸೆಮಿಫೈನಲ್ ಪಂದ್ಯವು ಅಮಿಟಿ ಎಫ್.ಸಿ ಗದ್ದೆಹಳ್ಳ ಹಾಗೂ ಕಡಂಗ ಎಫ್.ಸಿ ತಂಡಗಳ ನಡುವೆ ನಡೆದು, ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು ೨-೧ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.
ಅಮಿಟಿ ಗದ್ದೆಹಳ್ಳ ತಂಡದ ಪರವಾಗಿ ಅಫ್ರೀದ್ ಹಾಗೂ ಶಂಸೀರ್ ತಲಾ ಒಂದು ಗೋಲು ಬಾರಿಸಿದರು. ಕಡಂಗ ತಂಡದ ಪರವಾಗಿ ಅಫ್ಸಲ್ ಗೋಲು ಗಳಿಸಿದರು. ಅಮಿಟಿ ತಂಡದ ರಶೀದ್ ಸೆಮಿಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ದ್ವಿತೀಯ ಸೆಮಿಫೈನಲ್ ಪಂದ್ಯವು ಯುನೈಟೆಡ್ ಎಫ್.ಸಿ ಕುಂಜಿಲ ಹಾಗೂ ಕುಂಜಿಲ ಎಫ್.ಸಿ ತಂಡಗಳ ನಡುವೆ ನಡೆದು ಯುನೈಟೆಡ್ ಎಫ್.ಸಿ ಕುಂಜಿಲ ತಂಡವು ೩-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಸವಾದ್,ಅನೀಸ್, ಸ್ವಲಾಹ್, ಯುನೈಟೆಡ್ ಎಫ್.ಸಿ ಕುಂಜಿಲ ತಂಡದ ಪರವಾಗಿ ಗೋಲು ಬಾರಿಸಿದರು. ಯುನೈಟೆಡ್ ತಂಡದ ಸವಾದ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುಂಜಿಲ ಎಫ್.ಸಿ ತಂಡವು ೧-೦ ಗೋಲುಗಳ ಅಂತರದಿAದ ಕಡಂಗ ತಂಡವನ್ನು ಮಣಿಸಿ ತೃತೀಯ ಸ್ಥಾನವನ್ನು ಪಡೆಯಿತು. ಕಡಂಗ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕುಂಜಿಲ ಎಫ್.ಸಿ ತಂಡದ ಪರವಾಗಿ ಸುಲ್ಲಿ ಗೋಲು ದಾಖಲಿಸಿ,ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.
ವೈಯಕ್ತಿಕ ಬಹುಮಾನಗಳು
ಬೆಸ್ಟ್ ಮುನ್ನಡೆ ಆಟಗಾರ ಉನೈಸ್ ಕಡಂಗ ಎಫ್.ಸಿ, ಬೆಸ್ಟ್ ಮಿಡ್ ಫೀಲ್ಡರ್ ಸಾಬಿತ್ ಯುನೈಟೆಡ್ ಎಫ್.ಸಿ ಕುಂಜಿಲ,ಬೆಸ್ಟ್ ಡಿಫೆಂಡರ್ ಫಯಾಜ್ ಕಡಂಗ ಎಫ್.ಸಿ ,ಬೆಸ್ಟ್ ಗೋಲ್ ಕೀಪರ್ ಅಮಿಟಿ ತಂಡದ ಹಫೀಜ್,ಟಾಪ್ ಸ್ಕೋರರ್ ಸುಹೈಲ್ ಸ್ಟಾರ್ಸ್ ಗೋಣಿಕೊಪ್ಪ, ಉದಯೋನ್ಮುಖ ಗೋಲ್ ಕೀಪರ್ ರಾಯಿಲ್ ಮಾಡ್ರಿಡ್ ಎಫ್.ಸಿ ಕುಂಜಿಲ, ಬೆಸ್ಟ್ ಟೀಮ್ ಮ್ಯಾಡ್ರಿಡ್ ಎಫ್.ಸಿ ಕೊಂಡAಗೇರಿ, ಸ್ಟೆöÊಲಿಶ್ ಆಟಗಾರ ಅನೀಸ್ ಯುನೈಟೆಡ್ ಎಫ್.ಸಿ ಕುಂಜಿಲ, ಮ್ಯಾನ್ ಆಫ್ ದಿ ಸೀರಿಸ್ ಸಾದಿಕ್ ಅಮಿಟಿ ಎಫ್.ಸಿ ,ಬೆಸ್ಟ್ ಹಿರಿಯ ಆಟಗಾರ ಇರ್ಷಾದ್(ಕುಟ್ಟಿ) ಅಮಿಟಿ ಎಫ್.ಸಿ, ಉದಯೋನ್ಮುಖ ಆಟಗಾರ ಮನ್ನು ಮ್ಯಾಡ್ರಿಡ್ ಎಫ್ಸಿ ಕೊಂಡAಗೇರಿ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ರಶೀದ್ ಅಮಿಟಿ ಎಫ್.ಸಿ ಪಡೆದುಕೊಂಡರು.
ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿಯ ಪ್ರತಿಷ್ಠಿತ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಿತು.
ಎರಡು ತಂಡಗಳು ೧-೧ ಗೋಲುಗಳನ್ನು ದಾಖಲಿಸಿ ಪಂದ್ಯವನ್ನು ಸಮಬಲಗೊಳಿಸಿದ್ದರಿಂದ ಅಂತಿಮವಾಗಿ ಮಿಲನ್ಸ್ ಎಫ್.ಸಿ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ದಾಖಲಿಸಿತು. ತೀರ್ಪು ಗಾರರಾಗಿ ಮೈಸೂರಿನ ಕರಣ್ ಅಜೇಶ್,ಅವಿನಾಶ್ ಹಾಗೂ ಅಮ್ಮತ್ತಿಯ ಶೇಷಪ್ಪ ಕಾರ್ಯನಿರ್ವ ಹಿಸಿದರು.- ಕೆ.ಎಂ. ಇಸ್ಮಾಯಿಲ್ ಕಂಡಕರೆ