ಸೋಮವಾರಪೇಟೆ, ಏ. ೨೬: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕಾಜೂರು ಜಂಕ್ಷನ್‌ನಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಬೃಹತ್ ಗಾತ್ರದ ಮರದ ಕೊಂಬೆಗಳು ಬಿದ್ದಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಜೂರು ಜಂಕ್ಷನ್‌ನಲ್ಲಿರುವ ಅರಣ್ಯ ಇಲಾಖೆಯ ಕಚೇರಿಯ ಸಮೀಪದಲ್ಲೇ ಕಳೆದ ಮರ‍್ನಾಲ್ಕು ತಿಂಗಳುಗಳಿAದ ಬೃಹತ್ ಮರದ ತುಂಡುಗಳು ಬಿದ್ದಿವೆ. ರಸ್ತೆಗೆ ಒತ್ತಿಕೊಂಡAತೆ ಬೃಹತ್ ತುಂಡುಗಳನ್ನು ಹಾಕಲಾಗಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಡಾನೆಗಳ ಉಪಟಳವಿರುವ ಪ್ರದೇಶದಲ್ಲಿಯೇ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಲೆ ಬಾಳುವ ಮರಗಳಾದರೆ ತಕ್ಷಣ ಅರಣ್ಯ ಇಲಾಖೆಯವರು ತೆರವುಗೊಳಿಸಿ ಸಂಬAಧಿಸಿದ ಸಂಗ್ರಹಾಲಯಕ್ಕೆ ಸಾಗಿಸುತ್ತಾರೆ. ಆದರೆ ಬೆಲೆಬಾಳದ ಇಂತಹ ಮರಗಳನ್ನು ಮಾತ್ರ ರಸ್ತೆಯ ಬದಿಯಲ್ಲಿಯೇ ಬಿಡಲಾಗಿದೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಗಮನಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.