ಮುಳ್ಳೂರು, ಏ. ೨೬: ಶೂನ್ಯ ನೆರಳಿನ ದಿನದ ಅಂಗವಾಗಿ ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಾ. ೨೪ ಶೂನ್ಯ ನೆರಳಿನ ದಿನದಂದು ಮಧ್ಯಾಹ್ನ ೧೨.೨೪ಕ್ಕೆ ವೈಜ್ಞಾನಿಕವಾಗಿ ನೆರಳಿನ ದಿನ ಗೋಚರಿಸಿದ್ದ ಹಿನ್ನಲೆಯಲ್ಲಿ ಗ್ರಂಥಾಲಯದ ಓದುಗರು ಮತ್ತು ವಿದ್ಯಾರ್ಥಿಗಳಿಗೆ ವೈಜ್ಞಾನಿಕತೆಗೆ ಪೂರಕವಾದ ಚಟುವಟಿಕೆಗಳ ಮೂಲಕವಾಗಿ ಪ್ರದರ್ಶಿಸಲಾಯಿತು.
ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ. ದಿವ್ಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ, ಓದುಗರಿಗೆ ವೈಜ್ಞಾನಿಕ ಮಾಹಿತಿ ನೀಡಿದರು ನಂತರ ಲಂಬ ವಸ್ತುಗಳ ನೆರಳು ಗೋಚರಿಸದಿರುವುದನ್ನು ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಚಟುವಟಿಕೆ ನಡೆಸುವ ಮೂಲಕವಾಗಿ ಪ್ರಸ್ತುತ ಪಡಿಸಿದರು. ಈ ಸಂದರ್ಭ ಪ್ರಮುಖರಾದ ಶ್ರೀದೇವಿ, ಪೂರ್ಣಿಮ, ಪವಿತ್ರ, ಭಾರತಿ, ಶ್ವೇತಾ, ಮನು, ಅಂಬಿ, ರೋಹಿತ್, ವಿಷ್ಣು, ಪ್ರೀತು, ವೀಣಾ, ತುಳಸಿ, ಸುನಿಲ್, ಅನಿಲ್, ಪ್ರೇಮ್, ಪ್ರಿಯಾಂಕಾ, ರಾಜು, ಭೂಮಿಕಾ, ಹರ್ಮನ್, ಜಾನ್ಸಿ, ಅಂಕಿತ್, ದಿಗಂತ್ ಮುಂತಾದವರು ಇದ್ದರು.