ಕಡಂಗ, ಏ. ೨೫: ಎಸ್‌ಕೆಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಕಡಂಗ ಶಾಖಾ ವತಿಯಿಂದ ೩ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ತಾ. ೨೬ರಂದು(ಇAದು) ಕಡಂಗ ಕೊಕ್ಕಂಡಬಾಣೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ೫ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪ ಖಾಜಿಗಳಾದ ಅಬ್ದುಲ್ಲಾ ಮುಸ್ಲಿಂಯಾರ್ ಎಡಪಾಲ ವಹಿಸಲಿದ್ದು ಮುಖ್ಯ ಭಾಷಣಗಾರರಾಗಿ ಖ್ಯಾತ ಭಾಷಣಗಾರ ನೌಶಾದ್ ಬಾಕವಿ ತಿರುವನಂತಪುರA ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸೈಯದ್ ಮುಹಮ್ಮದ್ ಜಮಲುಲೈಲಿ ಪ್ರಾರ್ಥನೆಗೆ ಚಾಲನೆ ನೀಡಲಿದ್ದಾರೆ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಹಲವಾರು ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.