ಸುಂಟಿಕೊಪ್ಪ, ಏ. ೨೫: ಸುಂಟಿಕೊಪ್ಪ-ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ಡಿ. ಶಿವಪ್ಪ ಜ್ಞಾಪಕಾರ್ಥವಾಗಿ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾಟಗಳು ಮೇ ೧೬ ರಿಂದ ೨೫ ರವರೆಗೆ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆಲಿಕುಟ್ಟಿ ತಿಳಿಸಿದ್ದಾರೆ.