ಮಡಿಕೇರಿ, ಏ. ೨೪: ೨೫ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ನಡುವೆ ಆಯೋಜಿಸಲಾಗಿರುವ ಈ ಬಾರಿಯ ಮುದ್ದಂಡ ಕಪ್ನ ವಿಶೇಷತೆಯಾದ ಕೊಡವ ಕುಟುಂಬಗಳ ನಡುವಿನ ಮಹಿಳೆಯರ ೫ಎಸೈಡ್ ಹಾಕಿ ಪಂದ್ಯಾವಳಿ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ೫೮ ಕುಟುಂಬಗಳ ಪಾಲ್ಗೊಳ್ಳುವಿಕೆಯೊಂದಿಗೆ ತಾ. ೨೧ ರಿಂದ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆರಂಭಗೊAಡಿದ್ದ ಮಹಿಳಾ ಹಾಕಿಯ ಫೈನಲ್ ಹಂತಕ್ಕೆ ಕಂಬೀರAಡ ಹಾಗೂ ಕೆಚ್ಚೆಟ್ಟೀರ (ಕಡಗದಾಳು) ಕುಟುಂಬಗಳು ಪ್ರವೇಶಿಸಿವೆ. ಕೇವಲ ಮಹಿಳೆಯರಿಗಾಗಿಯೇ ವಿಶೇಷವಾಗಿ ಹಮ್ಮಕೊಂಡಿದ್ದ ಈ ೫ಎಸೈಡ್ ಹಾಕಿಯನ್ನು ಮುದ್ದಂಡ ಕುಟುಂಬ, ಕೊಡವ ಹಾಕಿ ಅಕಾಡೆಮಿಯ ಸಹಕಾರದೊಂದಿಗೆ ಕೊಡಗಿನ ಯುವಕರನ್ನು ಒಳಗೊಂಡಿರುವ ಬೆಂಗಳೂರಿನ ಲೇಕ್ಸೈಡ್ ವ್ಯಾರಡೈಸ್ ಹಾಕಿ ಕ್ಲಬ್ನ ತಂಡ ನಡೆಸಿಕೊಡುತ್ತಿದೆ. ತಾ. ೨೪ರ ಗುರುವಾರದಂದು ಬೆಳಿಗ್ಗೆ ೮ ತಂಡಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯಾಟ ನಡೆಯಿತು. ಇದರಲ್ಲಿ ಜಯಗಳಿಸಿದ ಕೆಚ್ಚೆಟ್ಟೀರ, ಕುಪ್ಪಂಡ (ಕೈಕೇರಿ) ಕಂಬೀರAಡ ಹಾಗೂ ಕಲಿಯಂಡ ಕುಟುಂಬ ಅಪರಾಹ್ನ ನಡೆದ ಸೆಮಿಫೈನಲ್ನಲ್ಲಿ ಸೆಣಸಿದವು. ರೋಚಕವಾಗಿ ನಡೆದ ಸೆಮಿಫೈನಲ್ನಲ್ಲಿ ಕೆಚ್ಚೆಟ್ಟೀರ (ಕಡಗದಾಳು) ಕುಪ್ಪಂಡ (ಕೈಕೇರಿ) ವಿರುದ್ಧ (೫-೦) ಗೋಲಿನಿಂದ ಪರಾಭವಗೊಳಿಸಿತು. ನೆರೆದಿದ್ದ ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಕಂಬೀರAಡ ಹಾಗೂ ಕಲಿಯಂಡ ನಡುವಿನ ಪಂದ್ಯದಲ್ಲಿ ಕಂಬೀರAಡ ತಂಡ ಟೈ ಬ್ರೇಕರ್ನಲ್ಲಿ ಜಯಗಳಿಸಿ ತಾ. ೨೬ರಂದು (ನಾಳೆ) ನಡೆಯಲಿರುವ ಫೈನಲ್ಗೆ ರಹದಾರಿ ಪಡೆಯಿತು. ಇಂದು ಜರುಗಿದ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಕದನ ಹಾಕಿ ಪ್ರಿಯರಿಗೆ ಮುದ ನೀಡಿತ್ತು.
ಕ್ವಾಟರ್ ಫೈನಲ್
ಕಾಂಡAಡ ಮತ್ತು ಕೆಚ್ಚೆಟ್ಟೀರ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಕೆಚ್ಚೆಟ್ಟೀರ ಜಯ ಸಾಧಿಸಿತು. ಕೆಟ್ಟೆಟ್ಟೀರ ಪರ ತೇಜಸ್ವಿ ೨ ಹಾಗೂ ಲಕ್ಷö್ಯ ೧ ಗೋಲು ದಾಖಲಿಸಿದರು. ಕಾಂಡAಡ ನೇಹಾ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಟ್ಟಂಡ (ಮಾದಾಪುರ) ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಟ್ಟಂಡ ಚುಪ್ಪಿ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
(ಮೊದಲ ಪುಟದಿಂದ) ಕಂಬೀರAಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ೯-೧ ಗೋಲುಗಳ ಅಂತರದಲ್ಲಿ ಕಂಬೀರAಡ ಗೆಲುವು ದಾಖಲಿಸಿತು. ಕಂಬೀರAಡ ಪರ ಮಿಲನಾ ಹಾಗೂ ದಿವ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೊನ್ನಮ್ಮ ೨ ಮತ್ತು ಕುಸುಮ ೧ ಗೋಲು ಬಾರಿಸಿದರು. ಚೆಯ್ಯಂಡ ದೀಕ್ಷ ೧ ಗೋಲು ದಾಖಲಿಸಿದರು. ಚೆಯ್ಯಂಡ ಭಾಗ್ಯಶ್ರೀ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಜಯ ಸಾಧಿಸಿತು. ಮುಕ್ಕಾಟಿರ ಶೈನು ಬೊಳ್ಳಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸೆಮಿಫೈನಲ್
ಕೆಚೆೆಟ್ಟೀರ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕೆÉಚೆಟ್ಟೀರ ಗೆಲುವು ಸಾಧಿಸಿತು. ಕೆಚ್ಚೆಟ್ಟೀರ ಪರ ತೇಜಸ್ವಿ ಹಾಗೂ ಕೆ.ಎ.ಪಾರ್ವತಿ ಗೋಲು ದಾಖಲಿಸಿದರು. ಕುಪ್ಪಂಡ ನಕ್ಷ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಂಬೀರAಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಂಬೀರAಡ ಜಯ ಸಾಧಿಸಿತು. ಕಲಿಯಂಡ ಮಿಲನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.