ಮಡಿಕೇರಿ, ಏ. ೨೫: ಸಾರ್ವಜನಿಕ ಗ್ರಂಥಾಲಯ ಇಲಾಖೆಯು ೨೦೨೧ ರಲ್ಲಿ ಮುದ್ರಣಗೊಂಡು ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಕನ್ನಡ, ಆಂಗ್ಲ, ಹಿಂದಿ ಮತ್ತು ಭಾರತೀಯ ಇತರೆ ಭಾಷೆಯ ಪುಸ್ತಕಗಳ ಆಯ್ಕೆ ಪಟ್ಟಿಯನ್ನು ಇಲಾಖೆಯ ಜಾಲತಾಣ ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಬಿಡುಗಡೆಗೊಳಿಸಿದ ಮಾಹಿತಿಯನ್ನು ಲೇಖಕರು, ಲೇಖಕ- ಪ್ರಕಾಶಕರು, ಪ್ರಕಾಶಕರು, ಪುಸ್ತಕ ಮಾರಾಟಗಾರರು ಮತ್ತು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಣೆ ನೀಡಲಾಗಿದೆ ಎಂದು ಕೊಡಗು ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯಾಧಿಕಾರಿ ಸುರೇಖಾ ಅವರು ತಿಳಿಸಿದ್ದಾರೆ.