ಸುಂಟಿಕೊಪ್ಪ, ಏ. ೨೩ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಹಳ್ಳ ಬಸ್ ತಂಗು ದಾಣದಲ್ಲಿ ತಂಗಿದ್ದ ಅಪರಿಚಿತ ವ್ಯಕಿ ಸಾವನ್ನಪ್ಪಿದ್ದಾರೆ. ಸುಂಟಿಕೊಪ್ಪ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಗದ್ದೆಹಳ್ಳದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆಶ್ರಯ ಪಡೆದಿದ್ದು ಮಂಗಳವಾರದAದು ಸಂಜೆ ಈ ವ್ಯಕ್ತಿ ಸಾವನ್ನಪ್ಪಿದ್ದು, ಈ ವ್ಯಕ್ತಿಯು ಭಾಷÀ ಎಂದು ಹೆಸರನ್ನು ಹೇಳಿಕೊಂಡಿದ್ದ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಈತನ ಕುಟುಂಬಸ್ಥರು ಅಥವಾ ಪರಿಚಯಸ್ಥರು ಇದ್ದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ £Ãಡುವಂತೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.