ಸೋಮವಾರಪೇಟೆ, ಏ. ೨೩: ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮತ್ತು ಹರದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗರಗಂದೂರು ಬಿ ಗ್ರಾಮದ ಹೊಸತೋಟದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮಾಡುತ್ತಿದೆ. ಸಂಘವು ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರೆ ಪ್ರವಾಸಿ ತಾಣಗಳು ಸ್ವಚ್ಛತೆಯಿಂದ ಕೂಡಿರಲಿದೆ ಎಂದರು.

ತAಗುದಾಣಗಳ ನಿರ್ಮಾಣ ನಂತರ ಅದರ ನಿರ್ವಹಣೆಯನ್ನು ಮಾಡಬೇಕಿದೆ. ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿದಲ್ಲಿ ಯಾವುದೇ ಅನಾಚಾರಗಳು ನಡೆಯುವುದಿಲ್ಲ. ಅದನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಮಾಡಬೇಕಿದೆ ಎಂದರು. ಇದೇ ಸಂದರ್ಭ ಗರಗಂದೂರು ಕಾಫಿ ತೋಟದ ಡಿ. ಸುರೇಶ್ ದಾಸಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸಿ.ಕೆ. ರೋಹಿತ್, ಗರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಎ. ಬೋಜಮ್ಮ, ಸದಸ್ಯ ಸಲೀಂ, ಸಂಘದ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಎಸ್.ಎಲ್. ಅಭಿನಂದ್ ಹಾಗು ಖಜಾಂಚಿ ಡಿ.ಪಿ. ಪ್ರೀತಮ್ ಸೇರಿದಂತೆ ಇತರರು ಇದ್ದರು.