ಮಡಿಕೇರಿ, ಏ. ೨೩: ಕೊಡವ ಭಾಷಿಕ ಜನಾಂಗದಲ್ಲೊAದಾದ ಐರಿ ಜನಾಂಗ ಬಾಂಧವರ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಅಮ್ಮಣಂಡ ಕಪ್ ತಾ. ೨೫ ರಿಂದ (ನಾಳೆಯಿಂದ) ಪ್ರಾರಂಭಗೊಳ್ಳಲಿದೆ. ಮೂರ್ನಾಡು ಬಾಚೆಟ್ಟೀರ ದಿ. ಲಾಲು ಮುದ್ದಯ್ಯ ಮೈದಾನದಲ್ಲಿ ತಾ.೨೫ ರಂದು ಬೆಳಿಗ್ಗೆ ೯:೩೦ ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ವಹಿಸಲಿದ್ದಾರೆ.

ಮೂರು ದಿನ ನಡೆಯುವ ಪಂದ್ಯದಲ್ಲಿ ೨೧ ತಂಡಗಳು ಸೆಣಸಾಡಲಿವೆ. ತಾ.೨೭ರಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಸೇರಿದಂತೆ ಅಮ್ಮಣಂಡ ಕುಟುಂಬದ ಪ್ರಮುಖರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಜನಾಂಗದ ೧೨ ನಿವೃತ್ತ ಶಿಕ್ಷಕರು ಹಾಗೂ ಸೇವಾ ಸಾಧಕರನ್ನು ಸನ್ಮಾನಿಸಲಾಗುವುದೆಂದು ಕ್ರೀಡಾ ಸಮಿತಿಯ ನಿಖಿಲ್ ನಿರಂಜನ್ ಹಾಗೂ ದೀಪಕ್ ಪೂಣಚ್ಚ ತಿಳಿಸಿದ್ದಾರೆ.