ಮಡಿಕೇರಿ, ಏ.೧೨ : ಗೃಹಲಕ್ಷಿö್ಮ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯ ರೂ. ೨೦೦೦ ಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಇದುವರೆಗೂ ೧,೨೦,೬೪೧ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಜನವರಿ-೨೦೨೫ರ ಮಾಹೆಯ ಅಂತ್ಯಕ್ಕೆ ೧,೧೬,೨೫೫ ಫಲಾನುಭವಿಗಳಿಗೆ ರೂ. ೨೩,೨೫,೧೦,೦೦೦ ಹಣ ಪಾವತಿಯಾಗಿರುತ್ತದೆ. ಈ ಯೋಜನೆಯಡಿ ಆಗಸ್ಟ್-೨೦೨೩ ರಿಂದ ಜನವರಿ-೨೦೨೫ರವರೆಗೆ ಒಟ್ಟು ೧೮ ತಿಂಗಳು ರೂ. ೪೦೩,೯೪,೦೨,೦೦೦ ಹಣ ಪಾವತಿಯಾಗಿರುತ್ತದೆ ಮತ್ತು ಶೇಕಡಾ ೯೬.೩೬ ರಷ್ಟು ಸಾಧನೆ ಮಾಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.