*ಗೋಣಿಕೊಪ್ಪ, ಏ. ೧೨ : ವಿದ್ಯುತ್ ಅವಘಡದಿಂದ ಉಂಟಾದ ೩.೫ ಲಕ್ಷ ನಷ್ಟ ಪರಿಹಾರವನ್ನು ಧರ್ಮಸ್ಥಳ ಸಂಘ ನೊಂದ ಕುಟುಂಬಗಳಿಗೆ ತುಂಬಿಕೊಟ್ಟಿದೆ. ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ದಿನೇಶ್.ಬಿ ಅವರು ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಸಂಘದ ಗೋಣಿಕೊಪ್ಪ ವಲಯ ದೇವರಪುರ ಕಾರ್ಯಕ್ಷೇತ್ರದಲ್ಲಿ ಅಮುದಾ ದೇವಿ ಅವರ ಮನೆಗೆ ವಿದ್ಯುತ್ ಅವಘಡ ಸಂಭವಿಸಿ ಅಂದಾಜು ೧.೫೦ ಲಕ್ಷ ಸಂಭವಿಸಿತ್ತು. ಜೊತೆಗೆ ದೇವರಪುರ ಗ್ರಾಮದ ವಿಶುಕುಮಾರ್ ಮನೆಗೂ ವಿದ್ಯುತ್ ಅವಘಡದಿಂದ ನಷ್ಟ ಸಂಭವಿಸಿತ್ತು.
ಈ ಹಿನ್ನೆಲೆ ನಷ್ಟಪರಿಹಾರಕ್ಕೆ ಸಂಬAಧಿಸಿದAತೆ, ಡಾ. ವಿರೇಂದ್ರ ಹೆಗ್ಡೆಯವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪುರಸ್ಕರಿಸಿದ ಹೆಗೆಡೆಯವರು ಅಮುದಾದೇವಿಯವರಿಗೆ ನಷ್ಟಪರಿಹಾರವಾಗಿ ೧.೫೦ ಲಕ್ಷ ಮತ್ತು ವಿಶು ಕುಮಾರ್ ಅವರ ನಷ್ಟಪರಿಹಾರವನ್ನು ೨ ಲಕ್ಷ ರೂಪಾಯಿಗಳಲ್ಲಿ ತುಂಬಿ ಕೊಡಲಾಯಿತು.
ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ದಮಯಂತಿ, ದೇವರಪುರ ಒಕ್ಕೂಟದ ಅಧ್ಯಕ್ಷÀ ನವೀನ್ಕುಮಾರ್, ಸೇವಾಪ್ರತಿನಿಧಿ ಸರೋಜ, ಗೋಣಿಕೊಪ್ಪ ವಲಯದ ಮೇಲ್ವಿಚಾರಕರು ನಿತಿನ್ ಮೂಲ್ಯ ಚೆಕ್ ಹಸ್ತಾಂತರ ಸಂದರ್ಭ ಹಾಜರಿದ್ದರು.