*ಗೋಣಿಕೊಪ್ಪ, ಏ. ೧೨: ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ನಿಮ್ಮೊಂದಿಗೆ ನಾವು ಪ್ರಾತ್ಯಕ್ಷತೆ ಹಾಗೂ ಶಾಲಾ ಮಕ್ಕಳ ಚಿತ್ರಕಲಾ ಶಿಬಿರ ವನ್ನು ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಕಾರ್ಯಕ್ರಮ ಸಂಚಾಲಕ ಕೆ.ಸಿ ಮಹಾದೇವ ಶೆಟ್ಟಿ, ನಿವೃತ್ತ ಚಿತ್ರಕಲಾ ಶಿಕ್ಷಕ ಊ.ರಾ. ನಾಗೇಶ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ. ಜಿ. ಅನಂತ ಶಯನ, ಬೆಂಗಳೂರು ಸಾಂಜಿ ಕಲಾವಿದ ಎಸ್. ಎಫ್. ಹುಸೇನಿ, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಚಿತ್ರಕಲಾ ಶಿಕ್ಷಕ ಬಿ. ಆರ್. ಸತೀಶ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಜಾನಪದ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ ಪದ್ಮನಾಭ, ಶಾಲಾಭಿವೃಧ್ದಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕೆ. ಆರ್. ಶಾಂತಿ, ಮುಖ್ಯ ಶಿಕ್ಷಕ ಎಚ್. ಕೆ. ಕುಮಾರ್ ಇದ್ದರು.