ಕುಶಾಲನಗರ, ಏ. ೧೨: ಮೊಬೈಲ್ ಶಾಪ್ನಲ್ಲಿ ಬೆಲೆ ಬಾಳುವ ಸ್ಮಾರ್ಟ್ ಫೋನ್ ಖರೀದಿಸಿದ ವ್ಯಕ್ತಿಯೊಬ್ಬ ನಕಲಿ ಫೋನ್ ಪೇ ದಾಖಲೆ ನೀಡಿ ಮಾಲೀಕರಿಗೆ ವಂಚಿಸಿರುವ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.
ಕುಶಾಲನಗರದ ಮೈಸೂರು ರಸ್ತೆಯ ಫಾತಿಮಾ ಕಾಂಪ್ಲೆಕ್ಸ್ ನಲ್ಲಿ ಇರುವ ಪೂಜಾ ಮೊಬೈಲ್ ಅಂಗಡಿಗೆ ಮೊಬೈಲ್ ಖರೀದಿಸಲೆಂದು ಬಂದ ವ್ಯಕ್ತಿಯೋರ್ವ ರೂ. ೨೯ ಸಾವಿರ ಮೌಲ್ಯದ ವಿವೋ ಮೊಬೈಲ್ ಅನ್ನು ಖರೀದಿಸಿದ್ದಾನೆ. ಬಳಿಕ ಹಣ ಟ್ರಾನ್ಸ್ಫರ್ ಮಾಡಿರುವುದಾಗಿ ತಿಳಿಸಿ ನಕಲಿ ಸ್ಕಾö್ಯನರನ್ನು ತೋರಿಸಿದ್ದಾನೆ. ಅಂಗಡಿ ಮಾಲೀಕನ ಮೆಸೆಂಜರ್ ನಲ್ಲಿ ಯಾವುದೇ ಸೂಚನೆ ಬಾರದಿದ್ದಾಗ ಕೆಲಕಾಲ ಅಲ್ಲಿಯೇ ಮಾತನಾಡುತ್ತಾ ನಿಂತಿದ್ದು ತನ್ನ ಮೊಬೈಲ್ ನಂಬರ್ ನೀಡಿ ಬಳಿಕ ವ್ಯಕ್ತಿ ಹೊರ ಹೋಗಿದ್ದಾನೆ. ಹಣ ವರ್ಗಾಯಿಸಿದ ಬಗ್ಗೆ ಸಂಶಯಗೊAಡ ಅಂಗಡಿ ಮಾಲೀಕ ನಂಬರ್ ಗೆ ಕರೆ ಮಾಡಿದಾಗ ಇಲ್ಲೇ ಇದ್ದೇನೆ ಬರುತ್ತೇನೆ ಎಂದು ಸಬೂಬು ಹೇಳಿದ್ದಾನೆ.
ನಂತರ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಮೊಬೈಲ್ ಅಂಗಡಿ ಮಾಲೀಕ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬAಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪ್ಪೆಕ್ಟರ್ ಗೀತಾ ಅವರು ಈ ಬಗ್ಗೆ ತನಿಖೆ ನಡೆಸಿದ್ದು ವಂಚನೆ ಮಾಡಿದ ವ್ಯಕ್ತಿ ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ನಿವಾಸಿ ಎಂಬ ಮಾಹಿತಿ ತಿಳಿದು ಬಂದಿದ್ದು, ಪೊಲೀಸರು ವಂಚಕನ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.