ಸೋಮವಾರಪೇಟೆ, ಏ. ೭: ರೋಟರಿ ಸೋಮವಾರಪೇಟೆ ಹಿಲ್ಸ್ ಮತ್ತು ರೋಟರಿ ಕುಶಾಲನಗರದ ವತಿಯಿಂದ ಹಾರಂಗಿ ಜಲಾಶಯ ಸಮೀಪದ ಹುಲುಗುಂದದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣದ ಬಸ್ ಶೆಲ್ಟರನ್ನು ಉದ್ಘಾಟಿಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ ಅವರು ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಈ ಸಂದರ್ಭ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ. ಹರಿ ಎ. ಶೆಟ್ಟಿ, ರೋಟರಿ ವಲಯ ಲೆಫ್ಟಿನೆಂಟ್ ಎಂ.ಎA. ಪ್ರಕಾಶ್ ಕುಮಾರ್, ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ರೋಟರಿ ಕುಶಾಲನಗರ ಅಧ್ಯಕ್ಷ ಸಿ.ಬಿ. ಹರೀಶ್, ಕಾರ್ಯದರ್ಶಿ ಡಿ.ಡಿ. ಕಿರಣ್, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ರೋಟರಿ ಸದಸ್ಯರುಗಳು ಇದ್ದರು.