ಮಡಿಕೇರಿ, ಏ. ೭: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ತಾ. ೧೧ ರಂದು ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ ಅಂದು ಬೆಳಿಗ್ಗೆ ೯ ಗಂಟೆಗೆ ಆರಂಭವಾಗಲಿದ್ದು, ಸ್ಥಳದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ವಧು-ವರರು ಕಡ್ಡಾಯವಾಗಿ ಭಾಗವಹಿಸಬೇಕು. ವಧುವಿಗೆ ೧೮, ವರನಿಗೆ ೨೧ ವರ್ಷ ತುಂಬಿರಬೇಕು. ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ, ಮತ್ತಿತರ ಮಾಹಿತಿ ನೀಡಬೇಕು, ವಿಶೇಷ ಚೇತನರು, ವಿಧುರ, ವಿಧವೆಯರು, ವಿಚ್ಛೇಧಿತರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೪೮೮೮೪೬೭೩, ೯೬೬೩೨೫೪೮೨೯ ಸಂಖ್ಯೆ ಸಂಪರ್ಕಿಸುವAತೆ ಕೋರಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸೆÀಟ್ಟೆಜನ ದೊರೆ ಗಣಪತಿ, ಖಜಾಂಜಿ ಕುಯ್ಯಮುಡಿ ಅಶ್ವಿನ್ ಕುಮಾರ್, ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಸಹಕಾರ್ಯದರ್ಶಿ ಕಟ್ರತನ ಲಲಿತ ಅಯ್ಯಣ್ಣ, ನಿರ್ದೇಶಕ ಕೆದಂಬಾಡಿ ಮುಕಂದ ಹಾಜರಿದ್ದರು.