ಕುಶಾಲನಗರ, ಏ ೭: ಮೇಯಲು ಬಿಟ್ಟಿದ್ದ ಹಸುವನ್ನು ನೆರೆಮನೆಯ ವ್ಯಕ್ತಿಯೊಬ್ಬ ತನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಹಾಲು ಕರೆದು ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆÀ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ಗ್ರಾಮದ ಎಂ.ಕೆ. ಅಬ್ಬಾಸ್ ಎಂಬವರಿಗೆ ಸೇರಿದ ಹಸು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿತ್ತು. ಮನೆಯವರು ತಮ್ಮ ಹಸುವನ್ನು ಹಗಲು ರಾತ್ರಿ ಹುಡುಕಾಡಿದರೂ ಯಾವುದೇ ಸುಳಿವು ಲಭಿಸದೆ ಪ್ರತಿ ಮನೆ ಮನೆಗೆ ತೆರಳಿ ವಿಚಾರಿಸಲು ತೊಡಗಿದ್ದರು. ಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆ ಎದುರುಗಡೆ ಕೊಟ್ಟಿಗೆವೊಂದಕ್ಕೆ ಹಸುವಿನ ವಾರಸುದಾರ ಅಬ್ಬಾಸ್ ಕುಟುಂಬ ಸದಸ್ಯರು ತೆರಳಿದ ಸಂದರ್ಭ ವ್ಯಕ್ತಿಯೊಬ್ಬ ಹಸುವನ್ನು ಕೊಟ್ಟಿಗೆಯಲ್ಲಿ ಸೇರಿಸಿ ಅದರ ಕಾಲುಗಳಿಗೆ ಹಗ್ಗ ಕಟ್ಟಿ ಹಾಲು ಕರೆಯುತ್ತಿದ್ದ ದೃಶ್ಯ ಗೋಚರಿಸಿದೆ.

ತಕ್ಷಣ ಈ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡುವುದರೊಂದಿಗೆ ಹಸು ಕಳುವು ಮಾಡಿ ಹಾಲು ಕರೆಯುತ್ತಿದ್ದ ವಿನೋದ್ ಎಂಬಾತನೊAದಿಗೆ ವಿಚಾರಿಸಿದಾಗ ಆತ ಹಸುವಿನ ಮಾಲೀಕನೊಂದಿಗೆ ಗಲಾಟೆ ಮಾಡಲಾರಂಭಿಸಿದ್ದು, ಈ ಸಂದರ್ಭ ಸ್ಥಳೀಯರು ಸೇರಿ ಹಸುವನ್ನು ವಾರಸುದಾರರಿಗೆ ಒಪ್ಪಿಸಿದರು.

ಪ್ರಕರಣ ಸಂಬAಧ ಹಸುವಿನ ಮಾಲೀಕ ಅಬ್ಬಾಸ್ ಅವರು ಬೈಲುಕುಪ್ಪೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಕರೆದು ವಿಚಾರಣೆಗೆ ಒಳಪಡಿಸಿದ್ದಾರೆ.