ಮಡಿಕೇರಿ, ಏ. ೨: ಮಡಿಕೇರಿ ತಾಲೂಕಿನ ಪಹಣಿಯಲ್ಲಿ ಕಂದಾಯ ನಿಗದಿಯಾಗದ ಜಮೀನುಗಳಿಗೆ ಕಂದಾಯ ನಿಗದಿಗೊಳಿಸುವ ಸಲುವಾಗಿ ಪ್ರಾಯೋಗಿಕ ಗ್ರಾಮವನ್ನಾಗಿ ಆಯ್ಕೆ ಮಾಡುವ ಕುರಿತು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಮಡಿಕೇರಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯ ಕೊಡಂಬೂರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಕ್ರಿಯೆಯು ತಾ. ೨೧ ರಿಂದ ಪ್ರಾರಂಭಗೊAಡು ಜೂನ್, ೧೫ ರವರೆಗೆ ಅಳತೆ ಕಾರ್ಯ ನಿರ್ವಹಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಮಡಿಕೇರಿ ಹೋಬಳಿ ಕಸಬಾ ಕಂದಾಯ ಪರಿವೀಕ್ಷಕರು ತಿಳಿಸಿದ್ದಾರೆ.