ಮಡಿಕೇರಿ. ಏ. ೨: ಅಮ್ಮತ್ತಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಯಿತು.
ಕಳೆದ ೨೭ ವರ್ಷಗಳಿಂದ ನವ ಸಂವತ್ಸರದ ಯುಗಾದಿ ಹಬ್ಬದ ಪ್ರಯುಕ್ತ ಆಚರಿಸಿಕೊಂಡು ಬರಲಾಗುತ್ತಿರುವ ಪೂಜಾ ಕಾರ್ಯಕ್ರಮ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ನೆರವೇರಿತು. ಪುರೋಹಿತರಾದ ಗುರುರಾಜ್ ಭಟ್ ಹಾಗೂ ದಿನೇಶ್ ಭಟ್ ಸದ್ಬಕ್ತರಿಗೆ ವಿಶೇಷ ಸಂಕಲ್ಪ ಸಹಿತ ಸಂಘಟನೆಯ ಆಶಯದಂತೆ ಲೋಕ ಕಲ್ಯಾಣಕ್ಕಾಗಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹ ಸಂಪರ್ಕ ಪ್ರಮುಖ ಪ್ರಿನ್ಸ್ ಗಣಪತಿ, ಕೊಡಗು ಜಿಲ್ಲಾ ಸಹ ಕಾರ್ಯವಾಹ ಕುಟ್ಟಂಡ ಮಿರನ್, ಜಿಲ್ಲಾ ಸೇವಾ ಭಾರತಿ ಪ್ರಮುಖ ಟಿ. ಸಿ. ಚಂದ್ರನ್ ಸೇರಿದಂತೆ ವಿಹಿಂಪ ಧರ್ಮ ಪ್ರಸಾರ ಪ್ರಮುಖ ಕಿರಣ್ ಅಮ್ಮತ್ತಿ ಘಟಕದ ಅಧ್ಯಕ್ಷ ಮುಕ್ಕಾಟಿರ ಸಂತೋಷ್, ಉಪಾಧ್ಯಕ್ಷ ಶ್ರೀನಿವಾಸ, ಹಿರಿಯರಾದ ಹೊಸೂರು ಶ್ರೀನಿವಾಸ ಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಹೊಸ ವರ್ಷ ಯುಗಾದಿ ಹಾಗೂ ಶ್ರೀ ಸತ್ಯ ನಾರಾಯಣ ಪೂಜೆ ಸಂಬAಧ ಚಿ. ನಾ. ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಿದರು. ಆಕಾಶವಾಣಿ ಉದ್ಘೋಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸತ್ಯ ನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಸಹ ಭೋಜನ ಏರ್ಪಡಿಸಲಾಗಿತ್ತು.