ಕೂಡಿಗೆ. ಏ. ೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಮುಖ್ಯನಾಲೆಯ ಎರಡನೇ ಹಂತದ ರೂ. ೭೦. ಕೋಟಿ ವೆಚ್ಚದ ಕಾಮಗಾರಿಯ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ಸಭೆಯಲ್ಲಿ ಕಾಮಗಾರಿಯ ಆರಂಭಕ್ಕೆ ಅನುಮೋದನೆ ದೊರೆತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕುಶಾಲನಗರದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಅಣೆಕಟ್ಟೆಯ ಸಮೀಪದಿಂದ ಮುಖ್ಯನಾಲೆ ೬ನೇ ತೂಬಿನವರೆಗೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಅಡಿಯಲ್ಲಿ ನಾಲೆಯ ಕಾಂಕ್ರೀಟೀಕರಣ ಮತ್ತು ಉಪ ಸೇತುವೆಗಳ ನಿರ್ಮಾಣದ ಕಾರ್ಯವು ೫೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಸಂಪೂರ್ಣಗೊAಡಿದೆ.
ಅದರAತೆಯೇ ೬ನೇ ತೂಬಿನಿಂದ ಕೊಡಗಿನ ಗಡಿ ಭಾಗವಾದ ಶಿರಂಗಾಲದ ೧೪ನೇ ತೂಬಿನವರೆಗೆ ಮುಖ್ಯನಾಲೆಯ ದುರಸ್ತಿಗೆ ಸಂಬAಧಿಸಿದAತೆ ಕಾಂಕ್ರೀಟೀಕರಣದ ಮೂಲಕ ಆಧುನಿಕ ನಾಲೆಯ ಅಭಿವೃದ್ಧಿಗೆ ಪೂರಕವಾಗುವ ಮೂಲಕ ಮುಖ್ಯನಾಲೆಯ ನೀರು ಸರಾಗವಾಗಿ ಹರಿದು ಹಾರಂಗಿ ಅಚ್ಚುಕಟ್ಟಿನ ಕೊನೆಯ ಭಾಗವಾದ ಮೈಸೂರು ಮತ್ತು ಹಾಸನ ಜಿಲ್ಲೆಯ ೫ ತಾಲೂಕಿನ ರೈತರಿಗೆ ಬೇಸಾಯಕ್ಕೆ ನೀರು ಸಮರ್ಪಕವಾಗಿ ದೊರಕುವಂತೆ ಮತ್ತು ಬಹುದಿನಗಳಿಂದ ಈ ಭಾಗದ ರೈತರ ಬೇಡಿಕೆ ಯಾಗಿದ್ದ ಬೃಹತ್ ಪ್ರಮಾಣದ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮದ ಮುಖೇನ ಕೈಗೊಳ್ಳಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಕಾಮಗಾರಿಗೆ ಸಂಬAಧಿಸಿದAತೆ ಹಾರಂಗಿ ನೀರಾವರಿ ಇಲಾಖೆಯ ಮೂಲಕ ಕ್ರಿಯಾಯೋಜನೆಗೆ ಸಂಬAಧಿಸಿದ ಸರ್ವೆ
(ಮೊದಲ ಪುಟದಿಂದ) ಕಾರ್ಯ ನಡೆಸಿ ಇಲಾಖೆಯ ರಾಜ್ಯಮಟ್ಟದ ಕಾವೇರಿ ನೀರಾವರಿ ನಿಗಮಕ್ಕೆ ಕಳುಹಿಸಲಾಗಿತು. ಅದನ್ವಯ ರಾಜ್ಯಮಟ್ಟದ ಟೆಂಡರ್ ಪ್ರಕ್ರಿಯೆ ನಡೆದಿದ್ದು ಸರಕಾರದಿಂದ ಅನುಮೋದನೆಗೊಂಡಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.