ಕುಶಾಲನಗರ, ಏ. ೨: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನ ಕಂಡಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಯ ಉದ್ದೇಶಕ್ಕಾಗಿ ನೂತನ ಸಮಿತಿಯನ್ನು ರಚಿಸಲಾಯಿತು. ಸರ್ಕಾರಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವತ್ತು ಸದಸ್ಯರ ಸಮಿತಿ ರಚಿಸಲಾಯಿತು, ಅಧ್ಯಕ್ಷರಾಗಿ ವಿ.ಪಿ. ಶಶಿಧರ್, ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ನಜೀರ್ ಅಹ್ಮದ್, ಉಪಾಧ್ಯಕ್ಷರಾಗಿ, ಎಂ.ವಿ. ನಾರಾಯಣ, ಎಂ.ಕೆ. ದಿನೇಶ್, ಟಿ.ಆರ್. ಶರವಣಕುಮಾರ್, ಕಾರ್ಯದರ್ಶಿಯಾಗಿ ಆರ್.ಕೆ. ನಾಗೇಂದ್ರ ಬಾಬು, ಖಜಾಂಚಿಯಾಗಿ ಎಸ್.ಕೆ. ಸತೀಶ್ ಸಂಚಾಲಕರಾಗಿ ಜೋಸೆಪ್ ಸೋನ್ಸ್ ವಿಕ್ಟರ್, ಸಹ ಕಾರ್ಯದರ್ಶಿ ಎಂ. ವಿ. ಮೊಯ್ದು, ಮಾಧ್ಯಮ ಕಾರ್ಯದರ್ಶಿಗಳಾಗಿ ಬಿ.ಎಸ್. ಲೋಕೇಶ್‌ಸಾಗರ್ ಹಾಗೂ ವನಿತ ಚಂದ್ರಮೋಹನ್, ಸದಸ್ಯರಾಗಿ ವಿ.ಡಿ. ಪುಂಡರೀಕಾಕ್ಷ ವಿ. ಎಸ್.ಆನಂದ, ಬಿ.ಆರ್. ನಾಗೇಂದ್ರ ಪ್ರಸಾದ್, ಹೆಚ್.ಟಿ. ವಸಂತ್, ಎಚ್. ಎನ್. ಚಂದ್ರು, ಡಿ.ವಿ. ರಾಜೇಶ್, ಬಿ.ಶಬೀರ್‌ಅಹಮದ್, ಲತಾ ನಂದಕುಮಾರ್, ವಿಜಯ್ ಕುಮಾರ್, ಬಿ.ಎಸ್. ಚಂದನ್, ಇಮ್ಯಾನ್ಯುಯಲ್ ಅಂತೋಣಿ, ಎಂ.ಡಿ. ರಂಗಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ೩೦ ಜನರ ಸಮಿತಿಯನ್ನು ರಚಿಸಲಾಯಿತು.