*ಗೋಣಿಕೊಪ್ಪ: ಶ್ರೀ ಕೀಲೇರಿ ಬಾಪುಕುಟ್ಟಿ ಮೇಸ್ತಿç ಸ್ಥಾಪಿಸಿದ ಶ್ರೀ ಮುತ್ತಪ್ಪ ದೇವಸ್ಥಾನದ ತೆರೆ ಮಹೋತ್ಸವ ಗೋಣಿಕೊಪ್ಪ ಹರಿಶ್ಚಂದ್ರಪುರ ಶ್ರೀ ಕೀಲೇರಿ ಮುತ್ತಪ್ಪ ಮಠಪುರ ಕ್ಷೇತ್ರದಲ್ಲಿ ನಡೆಯಿತು.
ಗಣಪತಿ ಹೋಮ, ಪ್ರತಿಷ್ಠಾ ದಿನಾಚರಣೆ ಪೂಜೆ, ಮುತ್ತಪ್ಪನ್ ವೆಳ್ಳಾಟಂ, ಕಾರಕೋರ್ ವೆಳ್ಳಾಟಂ, ಗುಳಿಗನ್ ವೆಳ್ಳಾಟಂ, ಕಂಡಾಕರ್ಣನ್ ವೆಳ್ಳಾಟಂ, ವಸೂರಿಮಾಲಾ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ತಿರುವಪ್ಪನ್ ಬೆಳ್ಳಾಟಂ, ಪೋದಿ ಬೆಳ್ಳಾಟಂ ನಡೆಯಿತು.
ಎರಡು ದಿನಗಳು ದೇವಸ್ಥಾನದಲ್ಲಿ ಭಕ್ತಾದಿಗಳು ನೆರೆದು ದೇವರ ದರ್ಶನ ಪಡೆದರು. ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಕೀಲೇರಿ ಶ್ರೀ ಮುತ್ತಪ್ಪ ಮಠಪುರ ಟ್ರಸ್ಟ್ ಸದಸ್ಯರುಗಳಾದ ಕೆ.ಜೆ. ಜಯೇಂದ್ರನ್, ಕೆ.ವೈ. ಸಮಜಿತ್, ಕೆ.ವೈ. ರಜಿತ್, ಮೋಹನ್‌ರಾಜ್ ಇದ್ದರು.ಅಮ್ಮತ್ತಿ: ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಸ್ಥಾನದ ೫೧ನೇ ವರ್ಷದ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಸಂಭ್ರಮ ಸಡಗರದಿಂದ ನಡೆಯಿತು.
ಮಾರ್ಚ್ ೨೯ ಮತ್ತು ೩೦ ರಂದು ನಡೆದ ತೆರೆ ಮಹೋತ್ಸವದಲ್ಲಿ ಅಮ್ಮತ್ತಿ, ಒಂಟಿಯAಗಡಿ, ಇಂಜಿಲಗೆರೆ, ಪಾಲಿಬೆಟ್ಟ, ಸಿದ್ದಾಪುರ, ವೀರಾಜಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
೨ ದಿನಗಳ ಕಾಲ ನಡೆದ ತೆರೆ ಮಹೋತ್ಸವದಲ್ಲಿ ವಿವಿಧ ದೇವರುಗಳ ಕೋಲಗಳ ತೆರೆಗಳನ್ನು ಭಕ್ತರು ನೋಡಿ ಕಣ್ತುಂಬಿಕೊAಡರು. ವಸೂರಿಮಾಲಾ ತೆರೆ, ಕಂಡಕರ್ಣನ್ ತೆರೆ, ಪೊಟ್ಟನ್ ತೆರೆ ಭಕ್ತರನ್ನು ಆಕರ್ಷಿಸಿತು. ಉಳಿದಂತೆ ಮುತ್ತಪ್ಪ ತಿರುವಪ್ಪನ ತೆರೆ, ವಿಷ್ಣುಮೂರ್ತಿ ತೆರೆ, ಶಾಸ್ತಪ್ಪನ್ ತೆರೆ, ಗುಳಿಗನ ತೆರೆಗಳು ನಡೆದವು. ತೆರೆ ಮಹೋತ್ಸವದ ಭಾಗವಾಗಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ತೆರೆ ಮಹೋತ್ಸವದ ಅಂಗವಾಗಿ ಮುತ್ತಪ್ಪ ದೇವಾಲಯ ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭ ದೇವಾಲಯದ ಅಧ್ಯಕ್ಷ ಸಿ.ಕೆ. ರವಿ, ಸಮಿತಿ ಪ್ರಮುಖರಾದ ಸುನೀಲ್, ಪ್ರಸನ್ನ, ಮಧು, ರಂಜನ್, ವಿಜು , ಶಶಿ, ಲೋಕೇಶ್, ಪುಟ್ಟು, ಜಿತ್ತು ಸೇರಿದಂತೆ ಪ್ರಮುಖರು ಇದ್ದರು.
ಸಂಸದರ ಭೇಟಿ
ಅಮ್ಮತ್ತಿ ಮುತ್ತಪ್ಪ ದೇವಾಲಯಕ್ಕೆ ಕೊಡಗು-ಮೈಸೂರು ಸಂಸದರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಶ್ರೀ ಮುತ್ತಪ್ಪನ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಅವರು, ದೇವಾಲಯಕ್ಕೆ ಭೇಟಿ ನೀಡಿದ್ದು ತುಂಬಾ ಸಂತಸವಾಗಿದೆ. ದೇವಾಲಯದ ಮೂಲಭೂತ ಅವಶ್ಯಕತೆಗಳನ್ನು ನೆರವೇರಿಸಲು ತಾನು ಬದ್ದನಾಗಿದ್ದು, ಈಗಾಗಲೇ ಆಡಳಿತ ಮಂಡಳಿಯವರು ದೇವಾಲಯಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಬೇಕೆಂದು ಮನವಿ ಮಾಡಿದ್ದು ಆದಷ್ಟು ಶೀರ್ಘವಾಗಿ ಒದಗಿಸಲಾಗುವುದೆಂದರು. ಈ ಸಂದರ್ಭ ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಸ್ಥಳೀಯರಾದ ಪಾಪಯ್ಯ ಇತರರು ಇದ್ದರು.ವೀರಾಜಪೇಟೆ: ಹಚ್ಚ ಹಸುರಿನ ಕಾನನದೊಳಗಿರುವ ಸುಮಾರು ೫೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ವೀರಾಜಪೇಟೆಯ ಬಾಳುಗೋಡು ಗ್ರಾಮದ ಕಂಡಿಮಕ್ಕಿ ದೇವಳದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ೧೦೧ ದೈವಗಳ ತೆರೆ ಮಹೋತ್ಸವವು ವೈಭೋವೋಪೇತವಾಗಿ ಭಕ್ತಿ ಪ್ರಧಾನವಾಗಿ ನಡೆಯಿತು.
ಇಲ್ಲಿ ವಿಶೇಷವಾಗಿ ನಡೆಯುವ ತೆರೆಗಳ ದರ್ಶನಕ್ಕಾಗಿ ಗ್ರಾಮಸ್ಥರಲ್ಲದೆ ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹಬ್ಬದ ಪ್ರಯುಕ್ತ ಮಾ. ೨೭ ರಂದು ಭಂಡಾರ ಹೊರಗೆ ತರಲಾಯಿತು. ಮಾ. ೨೮ ರಂದು ಭಂಡಾರ ಹಾಗೂ ದೇವರು ಸ್ಥಾನ ಹತ್ತುವ ಪದ್ಧತಿ, ಮಾ. ೨೯ ರಂದು ಬೆಳಿಗ್ಗೆ ಬಿಸು ಬೆಳ್ಳಾಟಂ, ತ್ರಿಮೂರ್ತಿ ತೆರೆ, ಮಧ್ಯಾಹ್ನದ ಬಳಿಕ ಕೋಲಾಟನಟ್ ಬೀರ ತೆರೆ, ಪೂವಕ್ಕ ತೆರೆ, ಪೊನ್ನುಮುತ್ತಪ್ಪ ತೆರೆ, ರಾತ್ರಿ ಅಯ್ಯಪ್ಪ ತೆರೆ ನಡೆಯಿತು.
ಮಾ. ೩೦ ರಂದು ಬೆಳಿಗ್ಗೆ ೬ ಗಂಟೆಗೆ ಗುರು ತೆಗೆಯುವುದು, ಬಳಿಕ ಬೀರಾಳಿ ತೆರೆ, ಕಾಪಾಳತಿ ತೆರೆ, ಗುಳಿಗ ತೆರೆ, ಚಿಂಗಜ್ಜ ತೆರೆ, ನುಚ್ಚುಟ್ಟೆ ತೆರೆ, ಕಾಳ ಬೈರವ ತೆರೆ, ದೇವರ ದರ್ಶನ, ಹರಕೆ ಒಪ್ಪಿಸುವುದು ನಡೆಯಿತು. ಸಂಜೆ ಪೊಟ್ಟ ತೆರೆ, ಕಾರಣ ತೆರೆ, ವಿಷ್ಣು ಮೂರ್ತಿ ತೆರೆ, ಅಮ್ಮೆರಾ ಮೂರ್ತಿ ತೆರೆ ಸೇರಿದಂತೆ ರಾತ್ರಿ ಇಡೀ ತೆರೆ ನಡೆಯಿತು.
ಮಾ. ೩೧ ರಂದು ಬೆಳಿಗ್ಗೆ ೮ ಗಂಟೆಗೆ ಅಜ್ಜಪ್ಪ ತೆರೆ, ಕೊರತಿ ತೆರೆ, ದೇವರ ದರ್ಶನ, ಬಳಿಕ ಮಧ್ಯಾಹ್ನದ ನಂತರ ಚಾಮುಂಡಿ ತೆರೆ ನಡೆದು ವಾರ್ಷಿಕ ತೆರೆ ಮಹೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ಅಂತಿಮ ತೆರೆ ಎಳೆಯಲಾಯಿತು.
ಇಲ್ಲಿನ ಹಸಿರು ಬನದಲ್ಲಿ ಸ್ಥಿತಗೊಂಡಿರುವ ದೇವಿಯು ತುಳುನಾಡಿನ ಪ್ರಖ್ಯಾತ ಕಾಡು ದೇವತೆಗಳಾದ ಚಾಮುಂಡಿ ಮತ್ತು ಕೊರತಿ ದೇವಿ ಸೇರಿದಂತೆ ಮೂರ್ತಿ ದೇವರುಗಳ ೧೦೧ ತೆರೆಗಳನ್ನು ೫೦೦ ವರ್ಷಗಳಿಂದ ತೆರೆಗಳನ್ನು ಕಟ್ಟುತ್ತಾ ಬರಲಾಗುತ್ತಿದೆ. ತೆರೆ ಮಹೋತ್ಸವದಲ್ಲಿ ದೇವಳದಲ್ಲಿ ತೆರೆ ಕಟ್ಟಿರುವ ಸಂದರ್ಭ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಂಪ್ರದಾಯವೂ ಇದೆ.
ಈ ದೈವಿಕ ನೆಲೆಯಿರುವ ಸ್ಥಳದಲ್ಲಿ ಶುದ್ಧವಾಗಿ ಬಂದು ಪ್ರಾರ್ಥಿಸಿದರೆ ಭಕ್ತರ ಕೋರಿಕೆಗೆ ಶೀಘ್ರದಲ್ಲಿ ಪರಿಹಾರ ದೊರಕುತ್ತದೆ ಎಂಬ ಪ್ರತೀತಿ ಕೂಡ ಇದೆ. ತೆರೆ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಮೂರು ದಿನಗಳ ಕಾಲ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ತೆರೆ ಮಹೋತ್ಸವಕ್ಕೆ ಆಗಮಿಸಿ ದೇವರ ಆರ್ಶೀರ್ವಾದ ಪಡೆದರು. ಮೂರು ದಿನಗಳ ಕಾಲ ನಡೆದ ಹಬ್ಬದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹಾಗೂ ಇದೆ ಊರಿನ ಹೊರಜಿಲ್ಲೆಗಳಲ್ಲಿ ನೆಲೆಸಿರುವ ಅಸಂಖ್ಯಾತ ಭಕ್ತರು ತೆರೆ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.ಪೆರಾಜೆ: ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಟ ಶ್ರೀ ಭಗವತಿ ದೊಡ್ಡಮುಡಿ, ತುಳುನಾಡಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂನ ಮಿಳಿತದೊಂದಿಗೆ ನಡೆಯುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆಯಿತು.
ಧಾರ್ಮಿಕ ನಂಬಿಕೆಯೊAದಿಗೆ ಭಗವತಿ ದೊಡ್ಡಮುಡಿ ನಡೆಯುತ್ತದೆ. ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಲಾಗುತ್ತಿದೆ. ಭಗವತಿ ದೈವದ ಮುಡಿಯನ್ನು ಬಣ್ಣರ ಜಾತಿಯವರು ಕಟ್ಟುತ್ತಿದ್ದಾರೆ. ಅಡೂರು ಬೆಡಿ, ತೊಡಿಕಾನ ಕೊಡಿ, ಪೆರಾಜೆ ಮುಡಿ ಎನ್ನುವ ನಾಣ್ನುಡಿಯಂತೆ ತಾ. ೧ ರಂದು ಪೆರಾಜೆ ಭಗವತಿ ಮುಡಿ ಪ್ರತಿವರ್ಷದಂತೆ, ಈ ವರ್ಷವೂ ಅದೇ ರೀತಿ ನಡೆಯಿತು.
ರಾಜ್ಯದಲ್ಲೇ ಅಪರೂಪದ ದೇವಿಯ ಆರಾಧನೆಯ ಮೂಲಕ ಪೂಜಿಸುವ ಪೆರಾಜೆ ಭಗವತಿ ದೊಡ್ಡಮುಡಿಯಲ್ಲಿ ಕೇರಳ ಮತ್ತು ಕರ್ನಾಟಕದ ನಾನಾ ಭಾಗಗಳಿಂದ ಬಂದ ಸಾವಿರಾರು ಭಕ್ತರು ನೋಡಿ ಭಕ್ತಿಯಿಂದ ಭಾವಪರವಶರಾದರು. ಈ ಸಂದರ್ಭ ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಕೆಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸಾವಿರಾರು ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಿದರು.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ವೆಂಕಟ್ರಮಣ ಪಾಙ್ಞಣ್ಣಾಯ, ದೇವಳದ ಆಡಳಿತ ಮೊಕ್ತೇಸರ ಎನ್.ಎ. ಜಿತೇಂದ್ರ, ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಮಿತಿಯ ಸದಸ್ಯರು, ತಕ್ಕಮುಖ್ಯಸ್ಥರು ಇದ್ದರು.ನೆಮ್ಮಲೆ ಕಿತ್ತ್ ಶ್ರೀ ಅಯ್ಯಪ್ಪ ದೇವರ ಉತ್ಸವ ಸಂಪನ್ನ
ಶ್ರೀಮAಗಲ: ಪೊನ್ನಂಪೇಟೆ ತಾಲೂಕು ನೆಮ್ಮಲೆ ಗ್ರಾಮ ಕಿತ್ತ್ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಜರುಗಿ, ಸೋಮ ವಾರ ಕೊಡಿಮರ ಇಳಿಸುವ ಮೂಲಕ ಉತ್ಸವ ಸಂಪನ್ನ ದೊಂದಿಗೆ, ದೇವರ ಕಟ್ಟು ತೆರವುಗೊಂಡಿತು.
ಮಾ. ೨೪ ರಂದು ರಾತ್ರಿ ೭ ಗಂಟೆಗೆ ಕೊಡಿಮರ ನಿಲ್ಲಿಸುವುದರೊಂದಿಗೆ ಉತ್ಸವ ಪ್ರಾರಂಭವಾಗಿದ್ದು, ಮಾ. ೨೮ ರವರೆಗೆ ಹರಕೆ ಹಾಗೂ ಊರ್ ಬೊಳಕ್ ನಡೆದು ಮಾ. ೨೯ ರಂದು ನೆರಪು ದಿವಸ ರಾತ್ರಿ ದೇವರ ಉತ್ಸವ ಮೂರ್ತಿಯ ದರ್ಶನ ಹಾಗೂ ವಸಂತಪೂಜೆ ನಡೆಯಿತು. ಮಾ. ೩೦ ರಂದು ದೇವರ ಅವಭೃತ ಸ್ನಾನದೊಂದಿಗೆ ಉತ್ಸವ ವಿಜೃಂಭಣೆಯಿAದ ಜರುಗಿತು.
ಭಾನುವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ ಮಹಾಪೂಜೆ, ಅಪರಾಹ್ನ ೪ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೫.೩೦ ಗಂಟೆಗೆ ದೇವರ ಉತ್ಸವ ಮೂರ್ತಿಯ ದರ್ಶನ ಹಾಗೂ ದೇವರ ನೃತ್ಯ, ೬.೩೦ ಗಂಟೆಗೆ ದೇವರ ಅವಭೃತ ಸ್ನಾನ, ಉತ್ಸವ ಮೂರ್ತಿಯ ಅಲಂಕಾರ ಹಾಗೂ ಪೂಜೆ, ನೈವೇದ್ಯ ಸಮರ್ಪಣೆ, ರಾತ್ರಿ ೭.೩೦ ರಿಂದ ೧೦ ಗಂಟೆಯವರೆಗೆ ವಿಶೇಷ ಚಂಡೆ ಮೇಳದೊಂದಿಗೆ ದೇವರ ಅಲಂಕೃತ ಉತ್ಸವ ಮೂರ್ತಿಯೊಂದಿಗೆ ದೇವರ ನೃತ್ಯ, ವಿಗ್ರಹ ಹಾಗೂ ಉತ್ಸವ ಮೂರ್ತಿಗೆ ಮಹಾಮಂಗಳಾರತಿಯೊAದಿಗೆ ಉತ್ಸವ ಸಂಪನ್ನವಾಯಿತು.
ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಗಳ ಅಲಂಕಾರ, ಚಂಡೆ, ಕೊಡವ ವಾಲಗ, ಸಿಡಿಮದ್ದುಗಳ ಪ್ರದರ್ಶನವನ್ನು ನೆರೆದಿದ್ದ ಅಪಾರ ಭಕ್ತಸಮೂಹ ಕಣ್ತುಂಬಿಕೊAಡಿತು. ಹಬ್ಬದ ಆರಂಭದ ದಿನದಿಂದ ಅಂತಿಮ ದಿನದವರೆಗೂ ರಾತ್ರಿ ಭಕ್ತಾದಿಗಳೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ, ಆಡಳಿತ ಮಂಡಳಿಯ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್ ಹಾಗೂ ಸಮಿತಿ ಸದಸ್ಯರ ಮುಂದಾಳತ್ವದಲ್ಲಿ ಹಾಗೂ ಗ್ರಾಮದ ಅರ್ಚಕ ಜಯಂತರವರ ನೇತೃತ್ವದಲ್ಲಿ ದೈವಿಕ ಕಾರ್ಯಗಳು ಹಾಗೂ ಉತ್ಸವ ವಿಜೃಂಭಣೆಯಿAದ ಜರುಗಿತು. ಕೊಡಿಮರ ಇಳಿಸುವುದು, ಭಂಡಾರ ಲೆಕ್ಕ ಹಾಗೂ ವಾರ್ಷಿಕ ಮಹಾಸಭೆ ತಕ್ಕ ಮುಖ್ಯಸ್ಥರು ಹಾಗೂ ಅಧ್ಯಕ್ಷ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ನಡೆಯಿತು.ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ
ಸಿದ್ದಾಪುರ: ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೬ ರಿಂದ ೮ ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಕುಕ್ಕನೂರು ಮೋಹನ ಹಾಗೂ ಕಾರ್ಯದರ್ಶಿ ಪುರುಷೋತ್ತಮ ತಿಳಿಸಿದ್ದಾರೆ.
ತಾ. ೬ ರಂದು ಸಂಜೆ ಗೋಪೂಜೆ ನಿತ್ಯಪೂಜೆ. ರಾತ್ರಿ ೭.೩೦ ಗಂಟೆಗೆ ಭಂಡಾರದ ಮನೆ ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು. ತಾ. ೭ ರಂದು ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹೋಮ, ೧೦ ಗಂಟೆಗೆ ಕಲಶ ಪೂಜೆ, ೧೧ಕ್ಕೆ ಗಂಗಾ ಸಾನ್ನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ತೀರ್ಥ-ಪ್ರಸಾದ. ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ೩.೩೦ಕ್ಕೆ ದೇವರ, ರಾತ್ರಿ ೭ ಗಂಟೆಯಿAದ ಕೊಂಡ ಪೂಜೆ ನಡೆಯಲಿದೆ. ತಾ. ೮ ರಂದು ಬೆಳಿಗ್ಗೆ ೮ ಗಂಟೆಗೆ ರುದ್ರಪಾರಾಯಣ, ೧೦ಕ್ಕೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ, ನಂತರ ಗಂಗಾ ಸಾನ್ನ, ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಹರಕೆ ಒಪ್ಪಿಸುವುದು, ತೀರ್ಥ-ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ನಂತರ ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀ ಬಸವೇಶ್ವರ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.ತಾ. ೬ ರಂದು ರಾಮನವಮಿ
ಸುಂಟಿಕೊಪ್ಪ: ಶ್ರೀ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಕೋದಂಡ ರಾಮ ಮಂದಿರದಲ್ಲಿ ಶ್ರೀ ರಾಮ ನವಮಿಯನ್ನು ತಾ. ೬ ರಂದು ಆಚರಿಸಲಾಗುವುದೆಂದು ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್ ತಿಳಿಸಿದ್ದಾರೆ.
ತಾ. ೬. ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ರಾಮನಿಗೆ ಪಂಚಾಮೃತ ಅಭಿಷೇಕ, ೧೦.೩೦ಕ್ಕೆ ರಾಮತಾರಕ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ಕ್ಕೆ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ದಿನದ ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಜಯಂತ್‌ಭಟ್ ಅವರ ನೇತೃತ್ವದಲ್ಲಿ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಮಡಿಕೇರಿ: ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟಗಳಿಂದ ದೇಶದ ಭಾವೈಕ್ಯತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿದೆ ಎಂದು ಮರ್ಕಂಜದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧಪುರುಷಮಠದ ಧರ್ಮದರ್ಶಿ ಹಾಗೂ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಮುಖ್ಯ ಕಾರ್ಯದರ್ಶಿ ರಾಜೇಶ್‌ನಾಥ್ ಜಿ ಹೇಳಿದರು.
ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ೨೦ನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಎಲ್ಲಾ ಧರ್ಮದ ಗುರುಗಳು ಒಟ್ಟಾಗಿದ್ದರೆ ಸಮಾಜವು ಒಟ್ಟುಗೂಡುತ್ತದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳು ಒಳ್ಳೆದನ್ನು ಬೋಧಿಸುತ್ತದೆ. ಅಮಲು ಪದಾರ್ಥದಿಂದಾಗಿ ಎಷ್ಟೋ ಮನೆಗಳು ಹಾಳಾಗುತ್ತಿದೆ, ಇಸ್ಲಾಂ ಧರ್ಮದಲ್ಲಿ ಅಮಲು ಪದಾರ್ಥ ಸೇವನೆಯನ್ನು ನಿಷೇಧಿಸಲಾಗಿದೆ, ನಾವುಗಳು ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಅವರ ಮನೆಗಳನ್ನು ಬೆಳಗಿಸಬೇಕೆಂದರು.
ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ಸಮಾಜಸೇವೆ, ಶಿಕ್ಷಣಕ್ಕೆ ಮತ್ತು ಸೌಹಾರ್ದತೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಸುಳ್ಯ ಬೀರಮಂಗಿಲ ಚರ್ಚ್ ಧರ್ಮಗುರು ವಿಕ್ಟರ್ ಡಿಸೊಜ ಮಾತನಾಡಿ, ನಾವೆಲ್ಲ ದೇವರ ಮಕ್ಕಳು, ಶಾಂತಿ, ಸಹಭಾಳ್ವೆಯಿಂದ ಬಾಳಬೇಕೆಂಬ ಸೌಹಾರ್ದತೆಯ ಸಂದೇಶ ನೀಡಿ ಎಲ್ಲಾ ಧರ್ಮದವರು ಸೇರಿ ಇಫ್ತಾರ್ ಕೂಟವನ್ನು ಆಚರಿಸಿ ಎಲ್ಲರು ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಉಂಟಾಗಿದೆ. ಕಳೆದ ೨೦ ವರ್ಷ ಸಂಸ್ಥೆ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಮಾಜದಲ್ಲಿ ನಡೆಯಲಿ ಎಂದು ಆಶಿಸಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ, ತೆಕ್ಕಿಲ್ ಪ್ರತಿಷ್ಠಾನ ಶಾಹಿದ್ ಅವರ ನೇತೃತ್ವದಲ್ಲಿ ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಎಲ್ಲಾ ಧರ್ಮದವರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ ಗೂನಡ್ಕ ಉದ್ಘಾಟಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರೆಭಾಷೆ ಮತ್ತು ಸಾಂಸ್ಕöÈತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಫ್ಪ ನಾಯ್ಕ್, ಫಾರೆಸ್ಟರ್ ಚಂದ್ರು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್, ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಷಂಶುದ್ದೀನ್, ಗೋಕುಲ್ ದಾಸ್, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ತೀರ್ಥರಾಮ ಪರ್ನೋಜಿ ಉಳುವಾರು, ಹಾಜಿ ಇಬ್ರಾಹಿಂ ಕತ್ತರ್, ಟಿ.ಎಂ. ಜಾವೇದ್ ತೆಕ್ಕಿಲ್, ಟಿ.ಎಂ. ಶಮೀರ್ ತೆಕ್ಕಿಲ್, ನ್ಯಾಯವಾದಿ ಮೂಸ, ನಗರ ಪಂಚಾಯಿತಿ ಸದಸ್ಯ ಧೀರಾಕ್ರಾಸ್ತ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ನಗರ ಪಂಚಾಯಿತಿ ಸದಸ್ಯ ಸಿದ್ಧೀಕ್ ಕೊಕ್ಕೊ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಕೆ. ಹನೀಫ್, ಸಂಯುಕ್ತ ಜಮಾಅತ್ ಖಜಾಂಚಿ ಹಮೀದ್ ಹಾಜಿ ಸುಳ್ಯ, ಕೆ.ಆರ್. ಪದ್ಮನಾಭ, ದಿನಕರ ಸಣ್ಣಮನೆ, ಬದುರುದ್ಧೀನ್ ಪಠೇಲ್, ಸೇರಿದಂತೆ ಸರ್ವಧರ್ಮದ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಕೊಳಕೇರಿ ಜಲಾಲಿಯ್ಯ ರಾತೀಬ್ ಸಂಘದ ವತಿಯಿಂದ ಬೃಹತ್ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಕೊಳಕೇರಿ ಟೌನ್ ಜುಮಾ ಮಸೀದಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಕೊಳಕೇರಿ ಜುಮಾ ಮಸೀದಿಯ ಮುದರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ನೇತೃತ್ವ ವಹಿಸಿದರು.
ಈ ಸಂದರ್ಭ ಜಮಾಅತ್ ಅಧ್ಯಕ್ಷ ಎ.ಎ. ಅಶ್ರಫ್, ಪ್ರಧಾನ ಕಾರ್ಯದರ್ಶಿ ರಫೀಕ್ ಎಂ.ಹೆಚ್., ಕೋಶಾಧಿಕಾರಿ ಕೆ.ವೈ. ಅಶ್ರಫ್, ಜಲಾಲಿಯ್ಯ ರಾತೀಬ್ ಸಂಘದ ಅಧ್ಯಕ್ಷ ಎಂ.ಎA. ಮುಹಮ್ಮದ್, ಎಂ.ಎA. ಇಬ್ರಾಹಿಂ, ಎಂ.ಕೆ. ಹಾರಿಸ್, ಕೆ.ವೈ. ಸುಲೈಮಾನ್, ಬಿ.ಎ. ಉನೈಸ್ ಮತ್ತಿತರರು ಉಪಸ್ಥಿತರಿದ್ದರು.