ಮಡಿಕೇರಿ, ಮಾ. ೨೩: ನಗರದ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಆಂಜನೇಯ ದೇವಾಲಯದ ಹೊರಾಂಗಣದಲ್ಲಿ ತಾ. ೩೦ರಿಂದ ಏ.೭ರವರೆಗೆ ಸಂಜೆ ೬.೩೦ ಗಂಟೆಯಿAದ ೮.೩೦ ರವರೆಗೆ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ತಾ.೩೦ ರಂದು ಮೈಸೂರಿನ ವಿದುಷಿ ಆರ್. ನಿತ್ಯಶ್ರೀ ಅವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, ತಾ.೩೧ ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ, ಏ.೧ ರಂದು ಮೈಸೂರಿನ ಹರಿಕಥಾ ವಿದುಷಿ ವಸಂತಲಕ್ಷಿö್ಮ ಅವರಿಂದ ಹರಿಕಥೆ, ಏ. ೨ ರಂದು ಮೈಸೂರಿನ ಹರಿಕಥಾ ವಿದ್ವಾನ್ ಸೀತಾರಾಮ್ ಮುನಿಕೋಟಿ ಅವರಿಂದ ಹರಿಕಥೆ, ಏ.೩ ರಂದು ಮೈಸೂರಿನ ವಿದ್ವಾನ್ ಎನ್. ಶ್ರೀನಾಥ್ ಅವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, ಏ. ೪ರಂದು ಮೈಸೂರಿನ ವಿದ್ವಾನ್ ಚಂದನ್‌ಕುಮಾರ್ ಅವರಿಂದ ಕೊಳಲು ವಾದನ, ಏ.೫ ರಂದು ಬೆಂಗಳೂರಿನ ಬಾಲಪ್ರತಿಭೆ ಈಶಾನ್ ಭಾರದ್ವಾಜ್ ಅವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, ಏ.೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶಿವಶಕ್ತಿ ವೃಂದದಿAದ ಧಾರ್ಮಿಕ ಸ್ತೊçÃತ್ರ ಪಠಣ, ರಾಮನವಮಿ ವಿಶೇಷ ಪೂಜೆ, ಸಂಜೆ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆ, ಮಕ್ಕಳಿಂದ ನೃತ್ಯ ವೈಭವ, ಏ.೭ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರುತಿಲಯ ತಂಡದಿAದ ಭಜನೆ, ಸಂಜೆ ಸುರತ್ಕಲ್ ತಡ್ಡಂಬೈಲಿನ ಶ್ರೀ ದುರ್ಗಾಂಭ ಮಹಿಳಾ ಯಕ್ಷಗಾನ ಮಂಡಳಿಯಿAದ ತಾಳಮದ್ದಳೆ ನಡೆಯಲಿದೆ. ಪ್ರತಿದಿನ ರಾಮಾಯಣ ಮತ್ತು ಭಗವದ್ಗೀತೆ ರಸಪ್ರಶ್ನೆ ನಡೆಯಲಿದೆ.