ಸುಂಟಿಕೊಪ್ಪ,ಮಾ.೨೩: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಶನಿವಾರ ಚಾಲನೆ ನೀಡಲಾಯಿತು.
ಶನಿವಾರದಂದು ಬೆಳಿಗ್ಗೆ ಗಣಪತಿ ಹವನ ೭.೧೫ ಗಂಟೆಗೆ ಶುದ್ಧಿ ಪುಣ್ಯಾಹ ವಿಶೇಷ ಪೂಜೆಯನ್ನು ಶ್ರೀ ಚಾಮುಂಡೇಶ್ವರಿ ದೇವಾಲಯದ ಆರ್ಚಕರಾದ ಮಂಜುನಾಥ ಉಡುಪ ಅವರು ನೆರವೇರಿಸುವ ಮೂಲಕ ಬಾವುಟವನ್ನು ಏರಿಸುವುದರೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಚಂಡೆಮೇಳ, ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಿತು. ಭಾನುವಾರ ಶ್ರೀಶಾಸ್ತಪ್ಪನ ವೆಳ್ಳಾಟಂ, ಶ್ರೀ ಗುಳಿಗ ವೆಳ್ಳಾಟಂ, ಮೆರವಣಿಗೆ, ಶ್ರೀ ಮುತ್ತಪ್ಪ ವೆಳ್ಳಾಟಂ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ವಿಷ್ಣುಮೂರ್ತಿ ವೆಳ್ಳಾಟಂ, ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, ಗುಳಿಗನ ಕೋಲ,ಶಾಸ್ತಪ್ಪನ ಕೋಲ, ಶ್ರೀಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲದೊಂದಿಗೆ ಪಟಾಕಿ ಸಿಡಿಸಲಾಯಿತು.
ತಾ. ೨೪ ರಂದು (ಇಂದು) ಬೆಳಿಗ್ಗೆ ಶ್ರೀ ರಕ್ತ ಚಾಮುಂಡಿಕೋಲ, ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ಶ್ರೀ ವಿಷ್ಣುಮೂರ್ತಿಕೋಲ, ಶ್ರೀ ಚಾಮುಂಡೇಶ್ವರಿ ಕೋಲ, ಶ್ರೀ ವಸೂರಿ ಮಾಲೆ ಕೋಲ, ಮದ್ಯಾಹ್ನ ೧೨ ಗಂಟೆಗೆ ಗುರುಶ್ರೀ ದರ್ಪಣ, ೨ ಗಂಟೆಗೆ ಬಾವುಟ ಇಳಿಸಲಾಗುವುದು.