ಕಣಿವೆ, ಮಾ. ೨೩: ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳುವ ಸಂಬAಧ ಪಟ್ಟಣದ ಬೈಚನಹಳ್ಳಿಯ ಮುತ್ತಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಲೋಗೋ ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಕುಶಾಲನಗರ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ, ಕೊಡಗು ಜಿಲ್ಲೆಯಲ್ಲಿ ಸುಮಾರು ೬೦ ಸಾವಿರಕ್ಕೂ ಹೆಚ್ಚಿನ ಬಿಲ್ಲವ ಕುಟುಂಬಗಳಿದ್ದು, ಕುಶಾಲ ನಗರದಲ್ಲಿ ೨೦೦ ಕುಟುಂಬಗಳಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವನ್ನು ಇನ್ನಷ್ಟು ಸಂಘಟಿಸಲು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸಲು ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ.

ಏಪ್ರಿಲ್ ೨೬ ಹಾಗೂ ೨೭ ರಂದು ಎರಡು ದಿನಗಳ ಕಾಲ ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸಮಾಜದ ಗೌರವಾಧ್ಯಕ್ಷ ಬಿ.ಟಿ. ರಮೇಶ್, ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷೆ ಕುಸುಮಾವತಿ, ಸಲಹೆಗಾರರಾದ ಚಂದ್ರಶೇಖರ್, ಲೀಲಾವತಿ, ಆಶಾ ಅಣ್ಣಪ್ಪ, ಮೋಣಪ್ಪ ಪೂಜಾರಿ, ಸುನಿಲ್ ಮೊದಲಾದವರಿದ್ದರು.